ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೈರತಿ ರಣಗಲ್ ಕನ್ನಡ ಭಾಷೆಯ ಮೊದಲ ಪ್ರೀಕ್ವೆಲ್ ಚಿತ್ರವಾಗಿದೆ. ಈ ಚಿತ್ರವು ಮುಫ್ತಿಯ ಪ್ರೀಕ್ವೆಲ್ ಕಥೆಯನ್ನು ಹೇಳುತ್ತದೆ ಎನ್ನಲಾಗಿದೆ. ನಿರ್ದೇಶಕ ನರ್ತನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಭೈರತಿ ರಣಗಲ್ ಹೇಗೆ ಭೈರತಿ ರಣಗಲ್ ಆದ ಅನ್ನೋದನ್ನೆ ಈ ಒಂದು ಚಿತ್ರದಲ್ಲಿ ತೋರಲಾಗುತ್ತಿದೆ. ಈ ಚಿತ್ರ ಕನ್ನಡದ ಮೊದಲ ಪ್ರೀಕ್ವೆಲ್ ಚಿತ್ರವಾಗಿ ಪ್ರೇಕ್ಷಕರನ್ನು ರಂಜಿಸಲಿದೆ.
ಭೈರತಿ ರಣಗಲ್ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಗೆ ರುಕ್ಮಿಣ ವಸಂತ್ ನಾಯಕಿಯಾಗಿದ್ದಾರೆ. ಛಾಯಾ ಸಿಂಗ್ ನಟಿಸಿದ್ದಾರೆ. ಸಿಂಗ ಪಾತ್ರದಲ್ಲಿ ಮಧು ಗುರುಸ್ವಾಮಿ. ವಿಲನ್ ರೋಲ್‌ನಲ್ಲಿ ಬಾಲಿವುಡ್‌ನ ನಟ ರಾಹುಲ್ ಬೋಸ್ ನಟಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.