ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮಾಕ್ಸ್’ ಸಿನಿಮಾದ ಬಿಗ್ ಸಕ್ಸಸ್ ಬಳಿಕ ನಟ ಕಿಚ್ಚ ಸುದೀಪ್ ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕಾಗಿ ತಯಾರಿ ನಡೆಸ್ತಿದ್ದಾರೆ. ಆದ್ರೆ ಈಗ ಈ ಸಿನಿಮಾದ ಶೂಟಿಂಗ್ ಆರಂಭ ಯಾವಾಗ ಎಂಬುದರ ಬಗ್ಗೆ ಖುದ್ದು ಕಿಚ್ಚ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾದ ಕುರಿತ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇಷ್ಟಕ್ಕು ಸುದೀಪ್ ಏನಂತ ಹೇಳಿದ್ದಾರೆ ನೋಡಿ, “ಏ.16ರಂದು ಏನು ನಡೆಯಲಿದೆ ಗೊತ್ತೆ? ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸಿನಿಮಾದ ಸೆಟ್, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿಸಲಾಗುವುದು” ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.
ಈ ಅಪ್‌ಡೇಟ್ ಕೇಳಿ ಸುದೀಪ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಸಿನಿಮಾ ಯಾವಾಗ ತೆರೆಮೇಲೆ ಬರುತ್ತೋ ಅಂತ ಕಾತುರದಿಂದ ಕಾದು ಕುಳಿತ್ತಿದ್ದಾರೆ.