ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪೌರಾಣಿಕ ಚಿತ್ರ ಕಣ್ಣಪ್ಪ ದೇಶಾದ್ಯಾಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಮೊದಲನೇ ವಾರಾಂತ್ಯದಲ್ಲಿಯೇ ಅದ್ಭುತ ಪ್ರದರ್ಶನ ನೀಡುತ್ತಿದೆ.
ಪ್ರಭಾಸ್, ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್ ಮತ್ತು ಮೋಹನ್‌ಲಾಲ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಹೆಚ್ಚುವರಿ ಹಿಟ್ ನೀಡಿದ್ದು, ಜೊತೆಗೆ ಮೋಹನ್ ಬಾಬು, ಶರತ್ ಕುಮಾರ್, ಮಧು ಮತ್ತು ಪ್ರೀತಿ ಮುಕುಂದನ್ ಮುಂತಾದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಣ್ಣಪ್ಪ ಸಿನಿಮಾ ಬಿಡುಗಡೆಗೊಂಡ ಮೊದಲ ದಿನ 9.35 ಕೋಟಿ ರೂಪಾಯಿ ಗಳಿಸಿದರೆ, ಎರಡನೇ ದಿನ 7 ಕೋಟಿ ಗಳಿಸಿದೆ. ಈ ಮೂಲಕ ಎರಡೇ ದಿನಗಳಲ್ಲಿ ಒಟ್ಟು ದೇಶೀಯ ಗಳಿಕೆ 16.35 ಕೋಟಿ ರೂ. ತಲುಪಿದೆ.
ಶನಿವಾರ ಈ ಚಿತ್ರವು ತೆಲುಗು ಭಾಗಗಳಲ್ಲಿ ಶತಮಾನೋತ್ಸವ ಮಟ್ಟದ ಪ್ರದರ್ಶನ ಕಾಣುತ್ತಿದ್ದು, ದಿನದ ಕೊನೆಯ ಶೋವಿನಲ್ಲಿ 58.54% ಆಕ್ಯುಪೆನ್ಸಿ ದಾಖಲಾಗಿದೆ. ತಮಿಳುನಾಡು ಪ್ರದೇಶದಲ್ಲಿಯೂ ಚಿತ್ರಕ್ಕೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಭಾಗದಲ್ಲಿ ಶನಿವಾರ 19.84% ಆಕ್ಯುಪೆನ್ಸಿ ದಾಖಲಾಗಿದ್ದು, ಚಿತ್ರ ಬೆಳಗ್ಗೆ 27% ಆಕ್ಯುಪೆನ್ಸಿಯಿಂದ ಆರಂಭವಾಗಿ ಮಧ್ಯಾಹ್ನ 23.41% ಮತ್ತು ರಾತ್ರಿ ಶೋಗಳಲ್ಲಿ 27.68%ಕ್ಕೆ ಏರಿಕೆಯಾಗಿದೆ.
ಹಿಂದಿ ಮತ್ತು ಮಲಯಾಳಂ ಆವೃತ್ತಿಗಳಲ್ಲಿಯೂ ಕಣ್ಣಪ್ಪ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಸ್ವಲ್ಪ ಕುಸಿತ ಕಂಡರೂ, ಮಧ್ಯಾಹ್ನ ಮತ್ತು ರಾತ್ರಿ ಶೋಗಳಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ.
ಇಂದು ಭಾನುವಾರದ ಗಳಿಕೆ ಸಹ ಹೆಚ್ಚು ದಾಖಲಾಗುವ ನಿರೀಕ್ಷೆಯಿದೆ. ಕಣ್ಣಪ್ಪ ಚಿತ್ರವು ವಿಷ್ಣು ಮಂಚು ಅವರ ಸಿನಿ ಬದುಕಿನ ಅತ್ಯುನ್ನತ ಬಾಕ್ಸ್ ಆಫೀಸ್ ಚಿತ್ರವಾಗುವ ಸಾಧ್ಯತೆಯಿದೆ.