ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಕೊರಿಯನ್ ಇಂಡಸ್ಟ್ರಿ ಫ್ಯಾನ್ ಅನ್ನೋದು ಎಲ್ಲರಿಗೂ ತಿಳಿದೇ ಇದೆ, ಅವರು ಫೋಟೊಗಳಿಗೆ ಪೋಸ್ ನೀಡೋ ಹಾರ್ಟ್ ಸಿಂಬಲ್ಗಳೆಲ್ಲವೂ ಕೊರಿಯನ್ನರಿಂದಲೇ ಕಲಿತಿದ್ದು.
ಇದೀಗ ಸುಪ್ರಸಿದ್ಧ ಕೊರಿಯನ್ ನಟ್ ಜಂಗ್ ಇಲ್ ವೂ ಜತೆ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ಮಿಲನ್ ಫ್ಯಾಷನ್ ವೀಕ್ನಲ್ಲಿ ಕಾಣಿಸಿದ್ದು, ಇಲ್ಲಿ ಅಂತಾರಾಷ್ಟ್ರೀಯ ನಟರು, ಬ್ರ್ಯಾಂಡ್ಗಳ ರಾಯಭಾರಿಗಳು ಮೀಟ್ ಆಗುತ್ತಾರೆ. ಈ ವೇಳೆ ಜಂಗ್ ಇಲ್ ಇಲ್ ವೂ ಹಾಗೂ ಥಾಯ್ ನಟ ಗಲ್ಫ್ ಕನಾವತ್ ಜತೆ ರಶ್ಮಿಕಾ ಫೋಟೊ ತೆಗೆಸಿಕೊಂಡಿದ್ದಾರೆ.