CINE | ರಾಕಿಂಗ್ ಸ್ಟಾರ್ ಅಮ್ಮನ ಮೊದಲ ಚಿತ್ರದ ಟೀಸರ್ ರೆಡಿ! ‘ಕೊತ್ತಲವಾಡಿ’ಯಲ್ಲಿ ಪೃಥ್ವಿ ಹೊಸ ಅವತಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಒಂದು ಪ್ರೊಡಕ್ಷನ್ ಹೌಸ್ ಓಪನ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಈಗ ಈ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಹೊಸ ಸಿನಿಮಾವೊಂದು ಬರಲಿದ್ದು, ಅದರ ಟೀಸರ್ ಕೂಡ ಇದೇ 21 ರಂದು ಬಿಡುಗಡೆಯಾಗಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಡೈರೆಕ್ಟರ್ ಶ್ರೀರಾಜ್‌ ಡೈರೆಕ್ಷನ್ ನಲ್ಲಿ ಮೂಡಿಬರ್ತಿರೋ ಈ ಚಿತ್ರಕ್ಕೆ ‘ಕೊತ್ತಲವಾಡಿ’ ಅನ್ನೋ ಹೆಸರಿಡಲಾಗಿದೆ. ಮೋಷನ್ ಪೋಸ್ಟರ್ ಮೂಲಕವೇ ಟೀಸರ್ ವಿಷಯವನ್ನ ಅಧಿಕೃತವಾಗಿಯೇ ಸಿನಿಮಾ ತಂಡವೇ ಹೇಳಿಕೊಂಡಿದೆ.

ಕೊತ್ತಲವಾಡಿ ಚಿತ್ರದಲ್ಲಿ ದಿಯಾ ಚಿತ್ರದ ಪೃಥ್ವಿ ಅಂಬಾರ್ ಅಭಿನಯಿಸಿದ್ದಾರೆ. ಹಿಂದೆಂದೂ ಮಾಡದೇ ಇರೋ ಪಾತ್ರದಲ್ಲಿಯೇ ಪೃಥ್ವಿ ಅಂಬಾರ್ ಇಲ್ಲಿ ಕಾಣಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!