ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಮನೆಮಾತಾಗಿದ್ದ ಐಶ್ವರ್ಯ ರಂಗರಾಜನ್ ಸದ್ದಿಲ್ಲದೇ ಸಿಂಗಲ್ ಲೈಫ್‌ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಹೌದು! ಕ್ರಾಂತಿ ಸಿನಿಮಾದಲ್ಲಿ ‘ಶೇಕ್ ಇಟ್ ಪುಷ್ಪವತಿ’ ಹಾಡು ಹಾಡಿರುವ ಐಶ್ವರ್ಯ ರಂಗರಾಜನ್ ಹುಡುಗರ ಮನಸು ಗೆದ್ದಿದ್ದರು. ಆದರೆ ಈಗ ಹಾರ್ಟ್ ಬ್ರೇಕ್ ಮಾಡಲು ಮುಂದಾಗಿದ್ದಾರೆ.
ಯಾವುದೇ ಆಡಂಬರವಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಐಶ್ವರ್ಯ ಇನ್ಸ್ಟಾಗ್ರಾಮ್ ನಲ್ಲಿ ‘ಎಂಗೇಜ್ಡ್. ನಾವು ಪರ್ಫೆಕ್ಟ್ ಮ್ಯಾಚ್ ಹುಡುಕಿಕೊಂಡಿದ್ದೇವೆ. ಇನ್ನು ಮುಂದೆ ಬೆಂಗಳೂರಿನಿಂದ ಮಂಗಳೂರು ಅಪ್ ಆಂಡ್ ಡೌನ್’ ಎಂದು ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥ ಆಗಿರುವ ಹುಡುಗ ಯಾರು ಅಂತ ಇನ್ನು ಸಸ್ಪೆನ್ಸ್ ನಲ್ಲಿದೆ ಏಕೆಂದರೆ ಟ್ಯಾಗ್ ಮಾಡಿರುವ ಅಕೌಂಟ್‌ನಲ್ಲಿ ಹುಡುಗನ ಹೆಸರನ್ನು ಕಾಮೆಂಟ್ರಿ ಆಂಡ್ ಮೀಮ್ಸ್ ಅಂತ ಬರೆದುಕೊಳ್ಳಲಾಗಿದೆ.
ಐಶ್ವರ್ಯ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗೆ ಅನುಪಮಾ ಗೌಡ, ಆಂಕರ್ ಅನುಶ್ರೀ, ಗಣೇಶ್ ಕಾರಂತ್, ವಾಸುಕಿ ವೈಭವ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.