ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಪ್ರೇಮಕಥನ ರಹಸ್ಯವಾಗಿ ಉಳಿದಿಲ್ಲ. ಪ್ರೀತಿ ವಿಚಾರವನ್ನು ಈ ಜೋಡಿ ಅಧಿಕೃತ ಘೋಷಿಸಿಕೊಂಡಿಲ್ಲ ಆದರೂ ನಡವಳಿಕೆಯಲ್ಲಿ ಪ್ರೇಮಿಗಳು ಎನ್ನುವುದನ್ನು ಪದೇ-ಪದೇ ಸಾಬೀತು ಮಾಡುತ್ತಿದ್ದಾರೆ. ಇದೀಗ ಇವರಿಬ್ಬರು ಒಟ್ಟಿಗೆ ಪ್ರಯಾಣ ಮಾಡುವ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ರಶ್ಮಿಕಾ ಮುಖಕ್ಕೆ ಮಾಸ್ಕ್ ಧರಿಸಿ ವಿಜಯ್‌ಗೂ ಮುನ್ನವೇ ಕಾರ್‌ನಲ್ಲಿ ಕುಳಿತಿದ್ರು. ವಿಜಯ್ ದೇವರಕೊಂಡ ಕ್ಯಾಮೆರಾ ಕಣ್ಣಿಗೆ ತಪ್ಪಿಸಿಕೊಳ್ಳುವಂತೆ ಓಡೋಡಿ ಹೋಗಿ ಬಳಿಕ ಕಾರ್ ಹತ್ತಿದ್ದಾರೆ.
ಇತ್ತೀಚೆಗೆ ಕುಬೇರ ಪ್ರಿರಿಲೀಸ್ ಇವೆಂಟ್‌ನಲ್ಲಿ ವಿಜಯ್ ಕುರಿತಾಗಿ ಕೇಳಲಾದ ಪ್ರಶ್ನೆಗೆ ರಶ್ಮಿಕಾ ಪ್ರೇಮಿ ಅನ್ನೋದು ಖಾತ್ರಿಯಾಗುವಂತೆ ಉತ್ತರ ಕೊಟ್ಟಿದ್ರು. ಅದಾದ ಕೆಲವೇ ದಿನಗಳ ಬಳಿಕ ಒಟ್ಟಿಗೆ ಕಾಣಿಸ್ಕೊಂಡು ಅನುಮಾನಕ್ಕೆ ಪುಷ್ಠಿ ಕೊಡುವಂತೆ ನಡೆದುಕೊಂಡಿದ್ದಾರೆ.