ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ನಲ್ಲಿರೋ ಬೆಡಗಿ ನಿವೇದಿತಾ ಗೌಡ, ನೆಗೆಟಿವ್ ಟ್ರೋಲ್ ಮಾಡುತ್ತಿದ್ದವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಡಿವೋರ್ಸ್ ಆದಾಗ ಅಥವಾ ಇನ್ನೇನೋ ಆದರೂ ಕೂಡ ನಮ್ಮ ಸಮಾಜದಲ್ಲಿ ಹುಡುಗಿಯದ್ದು ತಪ್ಪು ಅಂತ ಹೇಳುತ್ತಾರೆ. ನಮ್ಮ ಲೈಫ್‌ನಲ್ಲಿ ಏನೇನು ಸಮಸ್ಯೆಗಳು ಇರುತ್ತವೆ, ಅದನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ, ಅದು ಎಲ್ಲರಿಗೂ ಗೊತ್ತಿಲ್ಲ. ಹೇಳೋ ಅವಶ್ಯಕತೆ ಕೂಡ ಇಲ್ಲ. ಡಿವೋರ್ಸ್ ಆದಾಗ ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅಂತ ಹೇಳ್ತಾರೆ. ಇದನ್ನು ಬದಲಾಯಿಸೋಕೆ ಆಗೋದಿಲ್ಲ. ಈ ರೀತಿ ಮಾತಾಡೋದು ತಪ್ಪು, ಮಾನವೀಯತೆ ಇಲ್ಲ ಅಂತ ಅನಿಸುತ್ತೆ ಎಂದು ಹೇಳಿದ್ದಾರೆ.
ಬೇರೆಯವರು ನನ್ನ ಬಗ್ಗೆ ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಯೋಚಿಸೋದು ಅವರ ಪ್ರಾಬ್ಲಮ್, ನನ್ನ ಪ್ರಾಬ್ಲಮ್ ಅಲ್ಲ ಎಂದು ನಿವೇದಿತಾ ಸಖತ್ ಖಡಕ್ ಆಗಿ ಉತ್ತರಿಸಿದ್ದಾರೆ.