spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಬೂಲ್ ನಲ್ಲಿ ಮತ್ತೆ ನಾಗರಿಕ ವಿಮಾನ ಸಂಚಾರ ಆರಂಭ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ವಿಮಾನವೊಂದು ಕಾಬೂಲ್‌ ಏರ್‌ಪೋರ್ಟ್‌ ನಿಂದ ಸುಮಾರು 70 ಪ್ರಯಾಣಿಕರನ್ನು ಹೊತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಹಾರಿತು.

ಆಗಸ್ಟ್ 15ರ ಬಳಿಕ ಕಾಬೂಲ್‌ ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋದ ಮೊದಲ ನಾಗರಿಕ ವಿಮಾನ ಇದು.

ವಿಮಾನದಲ್ಲಿದ್ದ 70 ಪ್ರಯಾಣಿಕರ ಪೈಕಿ ಬಹುತೇಕರು ಅಫ್ಘನ್ನರು. ಅವರಲ್ಲಿ ಹಲವರು ವಿಶ್ವ ಬ್ಯಾಂಕ್‌, ಮತ್ತಿತರ ಸಂಸ್ಥೆಗಳ ಉದ್ಯೋಗಿಗಳ ಸಂಬಂಧಿಗಳು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.

ಪಾಕಿಸ್ತಾನದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಆದರೆ ಎಷ್ಟು ಅವಧಿಯ ಅಂತರದಲ್ಲಿ ಎರಡು ದೇಶಗಳ ರಾಜಧಾನಿಗಳ ಮಧ್ಯೆ ವಿಮಾನ ಓಡಾಡಲಿದೆ ಎಂದು ಹೇಳುವುದಕ್ಕೆ ಇದು ಸಮಯವಲ್ಲ ಎಂದು ಪಾಕಿಸ್ತಾನದ ವಿಮಾನ ಯಾನ ಸಂಸ್ಥೆಯೊಂದರ ವಕ್ತಾರರೊಬ್ಬರು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss