ಇಂದು ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರ: ಸಿಜೆಐ ಲಲಿತ್ ನಿವೃತ್ತಿ ಹಿನ್ನೆಲೆ ವಿಶೇಷ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ (ಸೋಮವಾರ) ಇಂದು ನೇರ ಪ್ರಸಾರವಾಗಲಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವೈ.ಯು.ಲಲಿತ್ ನೇತೃತ್ವದ ವಿಶೇಷ ಪೀಠದ ಆಶ್ರಯದಲ್ಲಿ ವಿಚಾರಣೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸೋಮವಾರ ನ್ಯಾಯಮೂರ್ತಿ ವೈ.ಯು.ಲಲಿತ್ ಅವರು ಮುಖ್ಯ ನ್ಯಾಯಮೂರ್ತಿಯಾಗಿರುವ ಕೊನೆಯ ದಿನ. ನ್ಯಾಯಮೂರ್ತಿ ಲಲಿತ್ ಅವರು ನ್ಯಾಯಾಧೀಶರಾಗಿ ತಮ್ಮ ಕೊನೆಯ ದಿನದ ಲೈವ್ ಸ್ಟ್ರೀಮಿಂಗ್ ಮಾಡಲು ಬಯಸಿದ್ದರು. ಈ ಪೀಠದಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಕೂಡ ಇದ್ದಾರೆ. ಕಳೆದ ಆಗಸ್ಟ್‌ನಲ್ಲಿ ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಕೊನೆಯ ಕೆಲಸದ ದಿನದಂದು ಕೂಡ ಲೈವ್ ಸ್ಟ್ರೀಮಿಂಗ್ ಆಯೋಜಿಸಿದ್ದರು. ಈಗಲೂ ಅದೇ ಮುಂದುವರೆದಿದೆ. ವಿಚಾರಣೆಯ ನೇರ ಪ್ರಸಾರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಸುಪ್ರೀಂ ಕೋರ್ಟ್‌ನ ವೆಬ್‌ಕಾಸ್ಟ್ ಚಾನೆಲ್ ಜೊತೆಗೆ ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಟೆಲಿಕಾಸ್ಟ್ ಇರುತ್ತದೆ.

ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಸಾಧನೆ ತೃಪ್ತಿ ತಂದಿದೆ ನಾನು 39 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೂ ಪ್ರತಿದಿನ ನನ್ನ ವೃತ್ತಿಯನ್ನು ಎಂಜಾಯ್ ಮಾಡುತ್ತೇನೆ. ನಾನು ನ್ಯಾಯಾಂಗ ವ್ಯವಸ್ಥೆಯ ಎಲ್ಲಾ ಹಂತಗಳನ್ನು ನೋಡಿದ್ದೇನೆ. ವಕೀಲನಾಗಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದೇನೆ. ಸಾಧಿಸಿದ್ದರಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!