ಎರಡು ಗುಂಪಿನ ನಡುವೆ ಮಾರಾಮಾರಿ: ಗ್ರಾ.ಪಂ.ಸದಸ್ಯ-ವೃದ್ಧೆಗೆ ಗಾಯ

ಹೊಸದಿಗಂತ ವರದಿ,ಮಂಡ್ಯ:

ದೇವಾಲಯ ಮುಂಭಾಗ ಸುರಿಯಲಾಗಿದ್ದ ಡಸ್ಟ್ (ಮರಳು) ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನಡುವೆ ಹೊಡೆದಾಟ ನಡೆದು ಗ್ರಾ.ಪಂ. ಸದಸ್ಯ ಹಾಗೂ ವೃದ್ದೆಯೋರ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಬೂದಗುಪ್ಪೆ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಆಲೂರು ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿ.ಸಿ. ಚಲುವರಾಜು ಹಾಗೂ ಜೆಡಿಎಸ್‌ನ ವಿಜಯೇಂದ್ರ ಅವರ ತಾಯಿ ಸಾಕಮ್ಮ ಎಂಬುವರು ಗಾಯಗೊಂಡಿದ್ದುಘಿ, ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೂದಗುಪ್ಪೆ ಗ್ರಾಮದ ಗ್ರಾಮ ದೇವತೆ ಶ್ರೀ ಬಸವೇಶ್ವರ ದೇವರ ಮುಂಭಾಗದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಡಸ್ಟ್ ಸುರಿದಿದ್ದರು. ಈ ಬಗ್ಗೆ ರಸ್ತೆಯಲ್ಲಿ ಜನರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ಗ್ರಾಘಿ.ಪಂ. ಸದಸ್ಯ ಬಿ.ಸಿ. ಚಲುವರಾಜು ಅವರಿಗೆ ವೌಖಿಕ ದೂರು ನೀಡಿದ್ದರು. ಈ ಬಗ್ಗೆ ಚಲುವರಾಜು ವಿಜಯೇಂದ್ರನಿಗೆ ಡಸ್ಟ್ ತೆರವುಗೊಳಿಸುವಂತೆ ಸಲಹೆ ನೀಡಿದ್ದರು. ಆದರೂ ಸಹ ವಿಜಯೇಂದ್ರ ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲಘಿ. ಆನಂತರ ಚಲುವರಾಜು ವಿಜಯೇಂದ್ರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಈ ದ್ವೇಷದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಜಾನುವಾರುಗಳಿಗೆ ಮೇವು ತೆಗೆದುಕೊಂಡು ಬೈಕ್‌ನಲ್ಲಿ ಬರುತ್ತಿದ್ದ ಚಲುವರಾಜನನ್ನು ಅಡ್ಡಗಟ್ಟಿದ ವಿಜಯೇಂದ್ರ ಮತ್ತು ಆತನ ಬೆಂಬಲಿಗರಾದ ಟಿಪ್ಪರ್ ಮಹದೇವ, ನಂದೀಶ್, ಮಾದ ಎಂಬುವರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಚಲುವರಾಜು ಪೊಲೀಸರಿಗೆ ದೂರು ನೀಡಿದ್ದರು.
ಗ್ರಾ.ಪಂ. ಸದಸ್ಯ ಚಲುವರಾಜು ಮೇಲೆ ವಿಜಯೇಂದ್ರ ಪ್ರತಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ವಿಜಯೇಂದ್ರನ ತಾಯಿ ಸಾಕಮ್ಮನ ಮೇಲೆ ಚಲುವರಾಜು ಗುಂಪಿನ ಸುಧಾಹನುಮಯ್ಯಘಿ, ವಿಶ್ವನಾಥ್, ರೇವಣ್ಣಘಿ, ನಾಗರಾಜು, ಪುಟ್ಟೇಗೌಡ ಹಾಗೂ ಹೊಸಹಳ್ಳಿ ನಾಗರಾಜು ಎಂಬುವರ ವಿರುದ್ಧ ಪೊಲೀಸರಿಗೆ ಪ್ರತಿ ದೂರು ನೀಡಲಾಗಿದೆ.
ಘಟನೆ ಸಂಬಂಧ ಮದ್ದೂರು ಪೊಲೀಸರು ಎರಡೂ ಗುಂಪುಗಳ ವಿರುದ್ಧ ದೂರು-ಪ್ರತಿ ದೂರು ದಾಖಲು ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!