spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೋಂಕು ಹರಡದಂತೆ ತಡೆಯೋಕೆ ವಿದ್ಯಾರ್ಥಿಗಳೇ ತಯಾರಿಸಿದ್ರೂ ‌ʼಸೆಲ್ಫ್ ಸ್ಯಾನಿಟೈಸಿಂಗ್ ಸೇಫ್ ಬೆಂಚ್ʼ!

- Advertisement -Nitte
  • ಕಾವ್ಯಾ ಜಕ್ಕೊಳ್ಳಿ

ಮಹಾಮಾರಿ ಕೊರೋನಾದಿಂದ ಎಷ್ಟೋ ಜನರ ಬದುಕು ಅಂಬಿಗನಿಲ್ಲದ ದೋಣಿಯಂತಾಯ್ತು, ನೂರಾರು ಉದ್ಯಮಗಳು ವಿಳಾಸವಿಲ್ಲದಂತೆ ಬಾಗಿಲು ಮುಚ್ಚಿಕೊಂಡಿತು. ನೋಡು ನೋಡುತ್ತಲೇ ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿಬಿಡ್ತು. ಆದರೆ ಇಂತಹ ಋಣಾತ್ಮಕ ಸ್ಥಿತಿಯ ಮಧ್ಯೆಯೂ ಹೊಸ ಆವಿಷ್ಕಾರಗಳ ಮನಸ್ಥಿತಿ ಹುಟ್ಟಿಕೊಂಡಿದ್ದು ಮಾತ್ರ ನಿಜ..

ಹೌದು… ಫರಿದಾಬಾದ್‌ನ ಶಿವ ನಾದರ್‌ ಶಾಲೆಯ ವಿದ್ಯಾರ್ಥಿನಿಯರ ತಂಡ ಹೊಸದೊಂದು ಆವಿಷ್ಕಾರಕ್ಕೆ ನಾಂದಿಯಾಗಿದ್ದಾರೆ. ಈ ಐದು ವಿದ್ಯಾರ್ಥಿನಿಯರ ತಂಡ ಸೇಫ್‌ ಬೆಂಚ್‌ ಎಂಬ ಸ್ವಯಂ ಸ್ಯಾನಿಟೈಸಿಂಗ್ ಬೆಂಚ್‌ ತಯಾರಿಸಿದ್ದಾರೆ.

ಈ ಸೇಫ್ ಬೆಂಚ್‌ಗೆ ಯುವಿ ಕ್ರಿಮಿನಾಶಕ ಲೈಟ್‌ ಅಳವಡಿಸಲಾಗಿದ್ದು, ಅದು‌ ಕೋವಿಡ್‌-19 ಸೋಂಕು ಸೇರಿದಂತೆ  ಕಾಂಜಂಕ್ಟಿವಿಟಿಸ್, ಇನ್ಫ್ಲುಯೆನ್ಸ್, ಹೆಪಟೈಟಿಸ್ ಎ ಸೇರಿದಂತೆ ಇತರೆ ಹರಡುವ ಸೋಂಕುಗಳನ್ನು ಕೊಲ್ಲುವುದರಲ್ಲಿ ಮುಂಚೂಣಿ.

ನಿರ್ವಾಣಿ ಜೈನ್, ಅರ್ಷಿಯಾ ಜೇಟ್ಲಿ, ಸುಹಾನಿ ಶರ್ಮಾ, ಗುರ್ನೂರಾ ಕೌರ್ ಮತ್ತು ಮಾನ್ಸಿ ಅಗರ್‌ವಾಲ್ ತಾವು ತಯಾರಿಸಿದ  ಈ ಸೇಫ್‌ ಬೆಂಚ್‌ ಅನ್ನು ಶಾಲೆಯ ವಾರ್ಷಿಕ ತಂತ್ರಜ್ಞಾನ ಕಾರ್ಯಕ್ರಮವಾದ ‘ಕೊಲ್ಲೊಕ್ವಿಮ್‌ 2020ʼ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ ಈ ಬೆಂಚ್?

ಯಾರಾದರೂ ಈ ಸೇಫ್ ಬೆಂಚಿನ ಮೇಲೆ ಕುಳಿತು ಎದ್ದ ತಕ್ಷಣ ಅಳವಡಿಸಿದಂತಹ ಸೆನ್ಸರ್‌  ಸ್ವಯಂಚಾಲನೆಗೊಂಡು ಇಡೀ ಬೆಂಚ್‌ ಅನ್ನು ವ್ಯವಸ್ಥಿತವಾಗಿ ಶುಚಿಗೊಳಿಸುತ್ತದೆ. ಅಲ್ಲದೇ ಬೆಂಚ್‌ಗೆ ಕ್ಯೂ ಆರ್‌ ಕೋಡ್‌ ಅಳವಡಿಸಲಾಗಿದ್ದು, ಅದು ಕೊನೆಯ ಬಾರಿಗೆ ಶುಚಿಗೊಳಿಸಿದ ವಿವರವನ್ನು ತಿಳಿಸುತ್ತದೆ. ಈ ಒಂದು ಬೆಂಚ್‌ ತಯಾರಿಸಲು ಸುಮಾರು 8,000 ರೂ. ಬೇಕಾಗುತ್ತದೆ.

SAFE, the self-sanitising bench, can be installed in public space across hospitals, parks, malls, and other outdoor spaces

ಮಾನ್ಸಿ ಮಾತು:

ಶಾಲೆ, ಆಸ್ಪತ್ರೆ, ಉದ್ಯಾನವನ, ಬಸ್‌ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಈ ಸ್ವಯಂ ಸ್ಯಾನಿಟೈಸಿಂಗ್ ಬೆಂಚ್‌ ಬಳಸಬೇಕು. ಕೋವಿಡ್‌ನ ಬಿಕ್ಕಟ್ಟಿನ ಸಮಯದಲ್ಲಿ ಸೋಂಕು ತಗುಲುವ ಪ್ರಮಾಣವನ್ನು ಈ ಬೆಂಚ್‌ ತಡೆಯುತ್ತದೆ ಎಂದು ಸೇಪ್‌ ಬೆಂಚ್‌ ಕರ್ತೃ ಮಾನ್ಸಿ ಹೇಳಿದ್ದಾರೆ.

ಹಾಗೆಯೇ ಗುರ್ನೂರಾ ಕೂಡ ಮಾತನಾಡಿದ್ದು, ಕೋವಿಡ್‌ ಜನರಲ್ಲಿ ಎಷ್ಟರ ಮಟ್ಟಿಗೆ ಭಯ ಬಿತ್ತಿದೆ ಎಂದರೆ ಜನ ಮನೆಯಿಂದ ಆಚೆ ಕಾಲಿಡುವುದಕ್ಕೂ ಹೆದರುತ್ತಾರೆ. ಹೊಗಡೆ ಹೋಗುವ ಜನರು ಸುರಕ್ಷಿತಾ ಭಾವದಲ್ಲಿ ಕೂತು ವಿಶ್ರಾಂತಿ ಪಡೆಯಬೇಕೆಂಬುದು ನಮ್ಮ ಧ್ಯೇಯ. ಇದೇ ಉದ್ದೇಶದಿಂದಲೇ ಈ ಸೇಫ್‌ ಬೆಂಚ್‌ ತಯಾರಿಸಿದ್ದೇವೆ. ಇದನ್ನು ಸಂಪೂರ್ಣವಾಗಿ ತಯಾರಿಸಲು 10 ತಿಂಗಳು ಬೇಕಾಯಿತು ಎಂದು ಹೇಳಿದ್ದಾರೆ.

ಮುಖ್ಯವಾಗಿ ಸಾರ್ವಜನಿಕ ಸ್ಥಳ ಮತ್ತು ಶಾಲೆಗಳಲ್ಲಿ ಇಂತಹ ಬೆಂಚ್‌ ಅಳವಡಿಸಿದರೆ ಕೋವಿಡ್‌ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು…

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss