ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮೈಸೂರು:
ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಮಾನಸ ಗಂಗೋತ್ರಿ ಕ್ಯಾಂಪಸ್ನ್ನು ಪ್ಲಾಸ್ಟಿಕ್ನಿಂದ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ತಿಳಿಸಿದರು.
ಶುಕ್ರವಾರ ಮಾನಸಗಂಗೋತ್ರಿಯ ಬಯಲು ರಂಗಮAಟಪ ರೌಂಡ್ ಕ್ಯಾಂಟೀನ್ ಬಳಿ, ಮೈಸೂರು ವಿಶ್ವವಿದ್ಯಾನಿಲಯ ಸ್ವಚ್ಛತಾ ಅಭಿಯಾನ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ `ಸ್ವಚ್ಛ ಗಂಗೋತ್ರಿ ಸಪ್ತಾಹ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನಸ ಗಂಗೋತ್ರಿ ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತವಾಗಬೇಕು. ಇನ್ಮುಂದೆ ಎರಡು ತಿಂಗಳಿಗೊಮ್ಮೆ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ವೃಂದದೊAದಿಗೆ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು. ನಿಮ್ಮ ಮನೆಯಂತೆ ಗಂಗ್ರೋತಿಯನ್ನು ಶುಚಿಯಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮಾನಸಗಂಗೋತ್ರಿಯನ್ನು ಕುವೆಂಪು ಅವರಿಂದ ಹಿಡಿದು ಸಾಕಷ್ಟು ಕುಲಪತಿಗಳು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿ ಎಲ್ಲವೂ ಇದೆ. ಸ್ವಲ್ಪ ನೀರಿನ ಕೊರತೆ ಇದೆ. ಸದ್ಯ ಬೋರ್ ವೆಲ್ನೀರು ಪೂರೈಕೆ ಆಗುತ್ತಿದೆ. ಕಾವೇರಿ ನೀರು ಹರಿಸಲು ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಕ್ಯಾಂಪಸ್ ಗೆ ಕಾವೇರಿ ನಿಗಮದಿಂದ ಶುದ್ಧ ಕಾವೇರಿ ನೀರು ಸರಬರಾಜು ಆಗಲಿದೆ ಎಂದರು.
ಕಾರ್ಯಕ್ರಮವನ್ನು ಕಸ ಗುಡಿಸುವ ಮೂಲಕ ಉದ್ಘಾಟಿಸಿದ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸ್ವಚ್ಛ ಭಾರತ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯೇ ನಮಗೆ ಪ್ರೇರಣೆ ನೀಡಿತು. ಮೈಸೂರು ನಗರವನ್ನು ನಾವೇ ಸ್ವಚ್ಛಗೊಳಿಸುತ್ತೇವೆ ಎಂಬ ಭ್ರಮೆ ನಮಗೆ ಇರಲಿಲ್ಲ. ಎಲ್ಲಾ ಅಹಂ ಬದಿಗಿಟ್ಟು ಕೆಲಸ ಮಾಡಿದೆವು. ಎಲ್ಲಿ ಬೇಕಾದರೂ ಹೋಗಿ ಏನಾದರೂ ಮಾಡುತ್ತೇವೆ ಎಂಬ ಶುದ್ಧ ಮನಸ್ಥಿತಿಯಲ್ಲಿ ಕೆಲಸ ಮಾಡಿದೆವು. ದಲಿತರ ಕಾಲೋನಿಯಿಂದ ಹಿಡಿದು ರುದ್ರಭೂಮಿ, ಶಾಲಾವರಣ, ದೇಗುಲ, ರಸ್ತೆ ಬದಿಗಳಲ್ಲಿ ಸ್ವಚ್ಚತಾ ಕೆಲಸ ಮಾಡಿದೆವು ಎಂದರು.
ಹಣದಿAದ ಎಲ್ಲವನ್ನೂ ಮಾಡಿಸಲು ಆಗುವುದಿಲ್ಲ. ಸ್ವಚ್ಚತೆ ಎಂಬುದು ಏಜೆನ್ಸಿ ಕೆಲಸವಾಗಬಾರದು. ಅದು ನಮ್ಮೆಲ್ಲರ ಕರ್ತವ್ಯ ಆಗಬೇಕು. ನಮ್ಮ ಮನಸ್ಸಿನಲ್ಲಿ ಹೆಪುö್ಪಗಟ್ಟಿದ ಅಹಂ ಭಾವನೆ ತೆಗೆದು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಮೈಸೂರು ವಿವಿ ಎನ್ ಎನ್ ಎಸ್ ಕಾರ್ಯಕ್ರಮಾಧಿಕಾರಿ ಡಾ.ಸುರೇಶ್, ಆಂತರಿಕ ಗುಣಮಟ್ಟ ಖಾತ್ರಿ ಸಂಸ್ಥೆ ನಿರ್ದೇಶಕ ಡಾ. ಎನ್.ಎಸ್. ಹರಿನಾರಾಯಣ, ಸ್ವಚ್ಛತಾ ಅಭಿಯಾನ ಸಮಿತಿ ಅಧ್ಯಕ್ಷ ಡಾ. ಎಂ.ವೈ, ಶ್ರೀನಿವಾಸ, ಅಮೃತೇಶ್ , ಪ್ರತಾಪ್, ಪವಿತ್ರ ಸೇರಿದಂತೆ ಇತರರು ಇದ್ದರು.