Tuesday, June 28, 2022

Latest Posts

ಕ್ಲೀವ್​ಲ್ಯಾಂಡ್​ ಓಪನ್​: ಫೈನಲ್ ನಲ್ಲಿ ಸೋತ ಸಾನಿಯಾ ಮಿರ್ಜಾ-ಕ್ರಿಸ್ಟಿನಾ ಮೆಕಾಲೆ ಜೋಡಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕ್ಲೀವ್​ಲ್ಯಾಂಡ್​ ಓಪನ್​ನ ಫೈನಲ್ ನಲ್ಲಿ ಭಾರತದ ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಅಮೆರಿಕಾದ ಜೊತೆಗಾರ್ತಿ ಕ್ರಿಸ್ಟಿನಾ ಮೆಕಾಲೆ ಸೋಲನ್ನು ಕಾಣುವ ಮೂಲಕ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಶನಿವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜಪಾನ್ ಜೋಡಿ ಶುಕೊ ಒಯೋಮಾ ಮತ್ತು ಈನಾ ಶಿಬಹಾರ​​ ವಿರುದ್ಧ ಅವರು ಸೋಲು ಅನುಭವಿಸಿದರು. ಇಂಡೋ-ಅಮೆರಿಕನ್ ಜೋಡಿಯು ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ 5-7, 3-6 ಸೆಟ್​ಗಳ ಅಂತರದಿಂದ ಸೋಲು ಕಂಡರು.
ಈ ವರ್ಷದ ಜಾಗತಿಕ ಟೆನಿಸ್ ಕ್ರೀಡಾಕೂಟಗಳಲ್ಲಿ ಮೊದಲ ಫೈನಲ್​ ತಲುಪಿದ ಸಾನಿಯಾ 180 ರ್ಯಾಂಕಿಂಗ್ ಪಾಯಿಂಟ್ಸ್ ಪಡೆದಿದ್ದು, 3,000 ಯುಎಸ್ ಡಾಲರ್ ಬಹುಮಾನ ಮೊತ್ತ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss