Wednesday, August 10, 2022

Latest Posts

ನೀವು ಎಂದಾದರೂ ಈ ರೀತಿ ಬಿಸಿ ಬಿಸಿ ಚಟ್ನಿ ಮಾಡಿದ್ದೀರಾ?: ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಮನೆಯಲ್ಲಿ ಸಾಗೂ, ಪಲ್ಯಕ್ಕೆ ತರಕಾರಿ ಇಲ್ಲದಿರುವಾಗ ನಿಮ್ಮ ತಿಂಡಿಗೆ ಈ ರೀತಿ ಚಟ್ನಿ ಮಾಡಿ ಮಾಡಿ ನೋಡಿ ನಿಮಗಾಗಿ ನೀಡಲಿದ್ದೇವೆ ಸಿಂಪಲ್ ಬಾಂಬೆ ಚಟ್ನಿ ರೆಸಿಪಿ..

ಬೇಕಾಗುವ ಪದಾರ್ಥಗಳು:

ಕಡಲೆ ಹಿಟ್ಟು
ಉದ್ದಿನಬೇಳೆ
ಕಡಲೇ ಬೇಳೆ
ಸಾಸಿವೆ
ಜೀರಿಗೆ
ಹಸಿಮೆಣಸು
ಟೊಮಾಟೋ
ಈರುಳ್ಳಿ
ಎಣ್ಣೆ
ನೀರು

ಮಾಡುವ ವಿಧಾನ:

  • ಒಂದು ಸಣ್ಣ ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ಹಾಕಿ ಅದಕ್ಕೆ ನೀರನ್ನು ಬೆರಸಿ ದೋಸೆ ಹಿಟ್ಟಿಗಿಂತ ತೆಳುವಾಗಿ ಮಾಡಿಕೊಂಡು ಪಕ್ಕದಲ್ಲಿಡಿ.
  • ನಂತರ ಒಂದು ಬಾಣಲಿಯಲ್ಲಿ 1 ಚಮಚ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಈರುಳ್ಳಿ, ಟೊಮಾಟೋ ಉದ್ದಕ್ಕೆ ಹೆಚ್ಚಿರುವ ಒಂದೆರಡು ಹಸಿಮೆಣಸಿನ ಕಾಯಿ(ಅಗತ್ಯಕ್ಕೆ ತಕ್ಕಂತೆ), ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ
  • ಈರುಳ್ಳಿ ಹಾಗೂ ಟೊಮಾಟೋ ಬೆಂದ ನಂತರ ಅದಕ್ಕೆ ತಯಾರಿಸಿದ ಕಡಲೆ ಹಿಟ್ಟಿನ ನೀರನ್ನು ಹಾಕಿ ಗಟ್ಟಿ ಹದಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿದರೆ ತಯಾರಾಗಲಿದೆ ಟೇಸ್ಟಿ ಚಟ್ನಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss