ಎಲ್ಲರಿಗೂ ವರ್ಕ್ ಫ್ರಂ ಹೋಂ ಹೆಚ್ಚು ಕಡಿಮೆ ಖಾಯಂ ಆಗಿ ಹೋಗಿರೋದು ನೆಟ್ ವರ್ಕ್ ಸಮಸ್ಯೆ ಹೆಚ್ಚಾಗೋಕೆ ಕಾರಣ. ಆದರೆ ಮನೆಯಲ್ಲಿ ಹಾಕಿರುವ ವೈಫೈ ಯಾಕೆ ಹೆಚ್ಚು ಸಲ disconnect ಆಗುತ್ತೆ ಅನ್ನೋದಕ್ಕೆ ಇಲ್ಲಿದೆ ಉತ್ತರ.. ಇವುಗಳನ್ನು ನೀವು ಚೆಕ್ ಮಾಡಿ ಪರಿಹರಿಸಿಕೊಳ್ಳಿ..
- ಹೆಚ್ಚು ಡಿವೈಸ್ ಕನೆಕ್ಟ್ ಆಗಿರುತ್ತದೆ: ನಿಮ್ಮ ಮನೆಗೆ ಬಂದು ಹೋಗುವ ಅನೇಕರು ನಿಮ್ಮ ವೈಫೈ ಪಾಸ್ ವರ್ಡ್ ಪಡೆದು ಡೇಟಾ ಲಿಮಿಟ್ ಖಾಲಿ ಮಾಡಿದರೂ ಕೂಡ ಈ ಸಮಸ್ಯೆ ಕಾಡುತ್ತದೆ.
- ಈಸಿಯಾಗಿ ನಿಮ್ಮ ವೈಫೈ ಪಾಸ್ ವರ್ಡ್ ಬದಲಿಸಿಕೊಳ್ಳಿ. ಅಗತ್ಯವಿರುವವರಿಗೆ ಮಾತ್ರ ಲಿಂಕ್ ಮಾಡಿ.
- ನಿಮ್ಮ ವೈಫೈ ಬ್ಯಾಂಡ್ ಅನ್ನು 2.4 GHz ನಿಂದ 5 GHz ಗೆ ಹೆಚ್ಚಿಸಿಕೊಳ್ಳಿ.
- ರೂಟರ್ ಇಡುವ ಜಾಗ ಸರಿ ಇರೋದಿಲ್ಲ: ನೀವು ಮನೆಯಲ್ಲಿ ಬಳಸುವ ವೈಫೈ ಬ್ಯಾಂಡ್ ರೂಟರ್ ಅನ್ನು ಕೂಡ ಸರಿಯಾದ ಜಾಗದಲ್ಲೇ ಇಡಬೇಕು. ಇಲ್ಲದಿದ್ದರೆ ನೆಟ್ ವರ್ಕ್ ಸಮಸ್ಯೆಯಾಗುತ್ತದೆ.
- ನಿಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್ ಗಳ ಹತ್ತಿರ ಮೊಡಮ್ ಇಡೋದು ಬೆಸ್ಟ್.
- ಅಪ್ಡೇಟ್ ಮಾಡಿ: ನೀವು ಬಳಸುವ ವೈಫೈ ಮೋಡಮ್ ಗಳಲ್ಲಿ ಡ್ರೈ ಗಳು ಕೂಡ ಆಗಾಗ ಅಪ್ಡೇಟ್ ಆಗಬೇಕು. ಇಲ್ಲದಿದ್ದರೆ ಇಂಟರ್ ನೆಟ್ ಸಮಸ್ಯೆ ಇರುತ್ತೆ.
- ನಿಮ್ಮ ವೈರ್ ಲೆಸ್ ಕಾರ್ಡ್ ಡ್ರೈವರ್ ಗಳನ್ನು ಬದಲಾಯಿಸಿ ಹೊಸ version ಗಳನ್ನು ಕೊಳ್ಳುವುದು ಒಳ್ಳೆಯದು.
- ಅದಕ್ಕೂ ಬ್ರೇಕ್ ಕೊಡಿ: ನೀವು ಬಳಸುವ ಮೊಬೈಲ್, ಲ್ಯಾಪ್ ಟಾಪ್ ಗಳಿಗೆ ಯಾವಾಗಲೂ ವೈ ಪೈ ಕನೆಕ್ಟ್ ಮಾಡಿಯೇ ಇಟ್ಟಿದ್ದರೆ ನೆಟ್ ವರ್ಕ್ ಸಮಸ್ಯೆಯಾಗುತ್ತೆ.
- ಯಾವಾಗಲೂ ಮೊಬೈಲ್ ಗೆ ಕನೆಕ್ಟ್ ಮಾಡುವ ಬದಲು ಕನಿಷ್ಠ 30 ಸೆಕೆಂಡ್ ಗಳ ಕಾಲನಾದರೂ ಡಿಸ್ ಕನೆಕ್ಟ್ ಮಾಡಿ ಇಡಿ.
- ಹೊಸ ಮೊಡಮ್ ತನ್ನಿ: ಏನೆಲ್ಲಾ ಮಾಡಿದರೂ ನಿಮ್ಮ ವೈಫೈ ಸುಧಾರಿಸಿಲ್ಲ ಎಂದಾದರೇ ಹೊಸ ಪ್ಲಾನ್ ಹೊಂದಿರುವ ಬೇರೆ ಮೋಡಮ್ ತರೋದು ಉತ್ತಮ ಆಯ್ಕೆ.
- ನಿಮ್ಮ ವೈಫೈ ಬ್ಯಾಂಡ್ ನ ಮಾರಾಟಗಾರನ ಬಳಿ ಹೋಗಿ ಹೊಸ ಪ್ಲಾನ್ ನ ಮೋಡಮ್ ಪಡೆಯೋದ್ರಿಂದ ನೆಟ್ ವರ್ಕ್ ಸರಿಯಾಗುತ್ತದೆ.