ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಮಾನದಲ್ಲಿ ಹೋಗೋಕೆ ನಾವೆಲ್ಲಾ ಆಸೆ ಪಡುವಾಗ, ಧೈರ್ಯವಾಗಿ ಆಕಾಶದಲ್ಲಿ ಹಾರೋಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೀಗೊಂದು ಧೈರ್ಯ ಪ್ರದರ್ಶನ ಮಾಡಿದ್ದು ಮನುಷ್ಯ ಅಲ್ಲ.. ಒಂದು ಪುಟ್ಟ ಶ್ವಾನ.
ಹೌದು, ಮಾಲೀಕನ ಮೇಲಿನ ನಂಬಿಕೆಯಿಂದ ಈ ಶ್ವಾನ ಪ್ಯಾರಾಗ್ಲಿಡಿಂಗ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಶ್ವಾನ ತನ್ನ ಮಾಲೀಕನ ಜೊತೆ ನಿರಾತಂಕವಾಗಿ ಗಾಳಿಯಲ್ಲಿ ಹಾರಾಟ ನಡೆಸಿದೆ.
ವಿಡಿಯೋದಲ್ಲಿ ಏನಿದೆ?
ಮಾಲೀಕನೋರ್ವ ತನ್ನ ಶ್ವಾನದ ಜೊತೆ ಜಾಲಿಯಾಗಿ ಪ್ಯಾರಾಗ್ಲಿಡಿಂಗ್ ಗೆ ಹೋಗಿದ್ದು, ಹಾಯಾಗಿ ಸುತ್ತಲಿನ ಸೌಂದರ್ಯ ಸವಿಯುತ್ತಿದೆ. ಶ್ವಾನಕ್ಕೆ ಯಾವುದೇ ಅಪಾಯವಾಗದಂತೆ ಕಟ್ಟಿದ್ದಾರೆ. ಫ್ರಾನ್ಸ್ ನ ಪ್ರಸಿದ್ಧ ಗುಡ್ಡ ಪ್ರದೇಶವಾದ ಕೋಲ್ ಡೆ ಗ್ರಾನನ್ ನಲ್ಲಿ ಪ್ಯಾರಾಗ್ಲಿಡಿಂಗ್ ಮಾಡಲಾಗಿದ್ದು, ಈ ಕ್ಯೂಟ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
https://www.instagram.com/reel/CTnp-AOpqBT/?utm_source=ig_web_copy_link