ಮಹಿಳೆಯರಿಗೆ 40 ದಾಟಿದರೆ ಅವರ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಸಿಗುತ್ತವೆ. ಮೆನೊಪಾಸ್, ಕೂದಲುದುರೋದು, ತೂಕ ಹೆಚ್ಚಾಗೋದು ಹೀಗೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತೆ. ಇನ್ನು 40 ದಾಟಿದ ಕೂಡಲೇ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಈ ರೀತಿ ಮಾಡಿ..
- ನಿಮ್ಮ ಆಹಾರದಲ್ಲಿ ಹೆಚ್ಚು ತರಕಾರಿ. ಹಣ್ಣು ಇರಲಿ.
- ಎಂದಿಗೂ ತಿಂಡಿ ಮಿಸ್ ಮಾಡಬೇಡಿ.
- ರಾತ್ರಿ ಮಲಗುವ ಮುನ್ನ ಕಡಿಮೆ ಊಟ ಮಾಡಿ. ಇನ್ನು ಮಧ್ಯಾಹ್ನ 3 ಗಂಟೆಯೊಳಗೆ ಊಟ ಮುಗಿಸಿ.
- ಕುರುಕುಲು ತಿಂಡಿ, ಕರಿದ ತಿಂಡಿ ಸೇವಿಸಬೇಡಿ.
- ನಿಮ್ಮ ಕೆಲಸದ ನಡುವೆ ದೇಹಕ್ಕೆ ಕೊಂಚ ವ್ಯಾಯಾಮ ಕೊಡಿ.
- 40 ರ ನಂತರ ಆರೋಗ್ಯ ಸಮಸ್ಯೆ ಹೆಚ್ಚಿರುತ್ತೆ. ಹಾಗಾಗಿ ಹೆಚ್ಚು ಆಯಾಸ ಪಡದೆ, ನಿದ್ದೆ ಮಾಡಿ.
- ನಿಮ್ಮ ಥೈರಾಯ್ಡ್ ಸಮಸ್ಯೆಯನ್ನೂ ಒಮ್ಮೆ ಪರೀಕ್ಷಿಸಿ.
- ಸೋಡಾ, ಸಕ್ಕರೆ ಅಂಶವಿರುವ ಯಾವುದೇ ತಂಪು ಪಾನೀಯ ಸೇವಿಸಬೇಡಿ,
- ಆದಷ್ಟು ಸಾವಯವ ಆಹಾರ, ಕ್ಯಾಲ್ಶಿಯಂಯುಕ್ತ ಪದಾರ್ಥಗಳನ್ನೇ ಸೇವಿಸಿ.
- Advertisement -