spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಬೈಲ್’ಗೆ ಬರುವ SPAM ಕಾಲ್’ಗಳಿಂದ ಸೇಫ್ ಆಗಿ ಇರೋದು ಹೇಗೆ?

- Advertisement -Nitte

ಇತ್ತೀಚಿಗೆ ಎಲ್ಲಾ ಅಂಗಡಿಗಳಲ್ಲೂ, ಮಾಲ್, ಕೆಫೆಗಳಲ್ಲೂ ನಮ್ಮ ಮೊಬೈಲ್ ನಂಬರ್ ಗಳನ್ನು ಕೊಟ್ಟಿರುತ್ತೇವೆ. ಆದರೆ ನೆನಪಿಡಿ.. ಈ ನಂಬರ್ ಕೇವಲ ಆ ಸಂಸ್ಥೆಗೆ ಮಾತ್ರವಲ್ಲದೆ ಎಲ್ಲಾ ಆಡ್ ಏಜನ್ಸಿ, ಸ್ಪ್ಯಾಮರ್ ಗಳ ಕೈಗೂ ಸೇರುತ್ತದೆ. ಇದರಿಂದ ನಿಮ್ಮ ಮೊಬೈಲ್ ನಂಬರ್ ಪಡೆದು ಬ್ಲಾಕ್ ಮೇಲ್ ಮಾಡೋದು, ಅನಗತ್ಯ ಕಾಲ್ಸ್ ಬರೋದು ಕೂಡ ಇರುತ್ತೆ.. ನಿಮಗೂ ಸ್ಪ್ಯಾಮ್ ಕಾಲ್ಸ್ ಬರುತ್ತೆ ಅಂತಾದ್ರೆ ಈ ರೀತಿ ಮಾಡಿ..

ನಂಬರ್ ಬ್ಲಾಕ್:
ಒಂದು ಬಾರಿ ನಿಮಗೆ ಆ ನಂಬರ್ ಸ್ಪ್ಯಾಮ್ ಅಂತ ತಿಳಿದಾಕ್ಷಣ ಆ ನಂಬರ್ ಅನ್ನು ಬ್ಲಾಕ್ & ರಿಪೋರ್ಟ್ ಮಾಡಿ. ಇದರಿಂದ ಮತ್ತೆ ನಿಮಗೆ ಆ ನಂಬರ್ ನಿಂದ ಕಾಲ್ ಬರೋದಿಲ್ಲ.

ಫೋನ್ ನಂಬರ್:
ಯಾರೋ ಅಪರಿಚಿತರು, ಅಂಗಡಿಯವರ ಹತ್ತಿರ ನಿಮ್ಮ ಮೊಬೈಲ್ ನಂಬರ್ ಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ನಿಮಗೆ ಹೆಚ್ಚು ಸ್ಪ್ಯಾಮ್ ಕಾಲ್ಸ್ ಬರೋದನ್ನು ತಪ್ಪಿಸಬಹುದು.

DND:
ನೀವು ಡಿಎನ್ ಡಿ ಮೋಡ್ ಆನ್ ಮಾಡಿದರೆ ನಿಮಗೆ ಬರುವ ಕಾಲ್ಸ್ ಹಾಗೂ ಮೆಸೇಜ್ ಗಳ ಬಗ್ಗೆ ಸಂದೇಶ ಬರುತ್ತದೆಯೇ ಹೊರತು ಯಾವುದೇ ಕರೆಗಳು ಬರುವುದಿಲ್ಲ.

ಕಾಲ್ ಪಿಕ್ ಮಾಡಬೇಡಿ:
ನಿಮಗೆ ಹೆಚ್ಚು ಸ್ಪ್ಯಾಮ್ ಅಥವಾ ಅನ್ ನೋನ್ ನಂಬರ್ ಕರೆಗಳು ಬರುತ್ತಿದ್ದರೆ ಅವರ ಕಾಲ್ ಪಿಕ್ ಮಾಡಬೇಡಿ.

ತಿಳಿದಿರಲಿ:
ನಿಮಗೆ ಸ್ಪ್ಯಾಮ್ ಕಾಲ್ ಮಾಡುವವರು ಕೇಳುವ ಅನಗತ್ಯ ಪ್ರಶ್ನೆಗಳು, ವೈಯಕ್ತಿಕ ಮಾಹಿತಿಗಳನ್ನು ನೀಡದಿರಿ.

ಮೋಸ ಹೋಗಬೇಡಿ:
ಯಾರಾದರೂ ಕಾಲ್ ಮಾಡಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹೇಳುವ ಮಾತ್ರಕ್ಕೆ ಮೋಸದ ಜಾಲಕ್ಕೆ ಸಿಲುಕಬೇಡಿ. ಬದಲಿಗೆ ಬೇರೆ ಪ್ರಶ್ನೆಗಳನ್ನು ಕೇಳಿ ಖಚಿತ ಪಡಿಸಿಕೊಳ್ಳಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss