Saturday, July 2, 2022

Latest Posts

ನಾಲಗೆಗೆ ಕಹಿಯಾಗಿದ್ರೂ ಸಖತ್ ಪವರ್ ಫುಲ್ ಈ ಹಾಗಲಕಾಯಿ: ಇದರ ಪ್ರಯೋಜನಗಳೇನು?

ಹಾಗಲಕಾಯಿಯಲ್ಲಿ ಅನೇಕ ಆರೋಗ್ಯಕರ ಪ್ರೊಟೀನ್ಸ್, ಫೈಬರ್, ನಾರಿನಾಂಶವನ್ನು ಹೊಂದಿರುತ್ತದೆ. ಇದರಲ್ಲಿರುವ ಔಷಧೀಯ ಅಂಶಗಳು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಲಿದೆ…ಏನೆಲ್ಲಾ ಲಾಭ ನೋಡಿ

ಕೊಲೆಸ್ಟ್ರಾಲ್: ಹಾಗಲಕಾಯಿಯಲ್ಲಿರುವ ಪೈಟೋನ್ಯೂಟ್ರಿಯೆಂಟ್ ಗಳೆಂಬ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೋಗಲಾಡಿಸುತ್ತದೆ.

ಮಧುಮೇಹ: ಪ್ರತಿದಿನ ಹಾಗಲಕಾಯಿ ಸೇವಿಸುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

ಮಲಭದ್ಧತೆ: ಹಾಗಲಕಾಯಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಪಾರಾಗಬಹುದು.

ತೂಕ ಇಳಿಕೆ: ಇದರಲ್ಲಿ ಕ್ಯಾಲೋರಿ, ಕೊಬ್ಬಿನಾಂಶ ಮತ್ತು ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರಲಿದ್ದು, ತೂಕ ಇಳಿಕೆಯಲ್ಲಿ ಸಹಕಾರಿಯಾಗಲಿದೆ.

ಕಣ್ಣಿಗೆ: ಇದರಲ್ಲಿ ಬೀಟಾ ಕ್ಯಾರೋಟಿನ್ ಅಂಶವು ಕಣ್ಣಿನ ತೊಂದರೆ ನಿವಾರಿಸುತ್ತದೆ.

ರಕ್ತ ಶುದ್ಧಿ: ನಿತ್ಯ ಹಾಗಲಕಾಯಿ ಜ್ಯೂಸ್ ಸೇವಿಸುವುದರಿಂದ ರಕ್ತ ಶುದ್ಧಿಯಾಗಲಿದೆ.

ಕ್ಯಾನ್ಸರ್:  ಹಾಗಲಕಾಯಿ ಸೇವಿಸುವುದರಿಂದ ಕ್ಯಾನ್ಸರ್ ಗೆ ಮೂಲವಾದ ಅಪಾಯಕಾರಿ ಜೀವಕೋಶಗಳನ್ನು ತಡೆಹಿಡಿಯಲು ಸಹಕಾರಿಯಾಗಲಿದೆ.  

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss