ನೇರಳೆ ಹಣ್ಣು ಆರೋಗ್ಯಕ್ಕೆ ಲಾಭದಾಯಕವಾಗಿದ್ದು, ಅದರಷ್ಟೆ ಲಾಭಗಳನ್ನು ನೇರಳೆ ಬೀಜವೂ ಹೊಂದಿರುತ್ತದೆ. ಈ ಬೀಜಗಳಲ್ಲಿ ಫೈಬರ್, ಖನಿಜಾಂಶಗಳ ಸಾಗರವಾಗಿದೆ. ಈ ಬೀಜಗಳನ್ನು ಪುಡಿ ಮಾಡಿ ಸೇವಿಸುವುದು ಹೆಚ್ಚು ಪ್ರಯೋಜನವಿದೆ..ಹಾಗಾಗಿ ಇನ್ನು ಮುಂದೆ ಅಪ್ಪಿತಪ್ಪಿಯೂ ಬಿಸಾಡಬೇಡಿ..
- ಮಧುಮೇಹ: ಇದರಲ್ಲಿರುವ ಜಾಂಬೋಲೈನ್ ಅಂಶಗಳುರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಜೀರ್ಣಕ್ರಿಯೆ: ನೇರಳೆ ಹಣ್ಣಿನ ಬೀಜ ಸೇವಿಸುವುದರಿಂದ ಇದರಲ್ಲಿನ ನಾರಿನಾಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ.
- ರಕ್ತದೊತ್ತಡ: ಬೀಜಗಳು ಆಂಟಿ ಆಕ್ಸಿಡೆಂಟ್ ಆಗಿದ್ದು, ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.
- ತೂಕ ಇಳಿಕ: ಇದರಲ್ಲಿ ಹೆಚ್ಚಿನ ನಾರಿನಾಂಶಗಳಿದ್ದು, ತೂಕ ಇಳಿಕೆಗೆ ಸಹಕಾರಿಯಾಗಲಿದೆ.
- ಮಲಬದ್ಧತೆ: ನೇರಳೆ ಬೀಜಗಳ ಸೇವನೆಯಿಂದ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗಲಿದೆ. ಇದು ಹೊಟ್ಟೆ ನೋವು, ಮಲಬದ್ಧತೆಯನ್ನೂ ಕಡಿಮೆ ಮಾಡುತ್ತದೆ.
- ರಕ್ತ ಶುದ್ಧಿ: ಇದರಲ್ಲಿನ ಕಬ್ಬಿಣಾಂಶವು ರಕ್ತ ಹೀನತೆ, ರಕ್ತ ಶುದ್ಧೀಕರಿಸಲು ಸಹಕಾರಿಯಾಗಲಿದೆ.