ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಪ್ಪಾಯಿ ಹಣ್ಣಿನ ಎಲೆಯಲ್ಲಿದೆ ಆರೋಗ್ಯಕರ ಔಷಧ: ಇಲ್ಲಿದೆ ನೋಡಿ ಅದರ ಗುಣಲಕ್ಷಣಗಳು

ಯಾವವಾಗಲೂ ಪಪ್ಪಾಯಿ ಹಣ್ಣಿನಲ್ಲಿನ ಪೌಷ್ಠಿಕಾಂಶಗಳಿದ್ದು, ಇದರಲ್ಲಿರುವ ವಿಟಮಿನ್ ಸಿ ಹಾಗೂ ಎ,ಬಿ ಗಳು ಹೆಚ್ಚಾಗಿದೆ. ಸಾಮಾನ್ಯವಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಹಣ್ಣಿನ ಎಲೆಗಳನ್ನು ಬಳಸುವ ಅಭ್ಯಾಸ ಇದೆ. ಆದರೆ ಈ ಪರಂಗಿ ಹಣ್ಣಿನ ಎಲೆಯ ಆರೋಗ್ಯಕರ ಲಕ್ಷಣಗಳು ಇಲ್ಲಿದೆ ನೋಡಿ…

ಡೆಂಗ್ಯೂ ಜ್ವರ:
ಡೆಂಗ್ಯು ಜ್ವರದಿಂದ ಬಳಲುತ್ತಿರುವವರಗೆ ಅಗತ್ಯ ಪ್ಲೇಟ್ ಲೆಟ್ಸ್ ಗಳನ್ನು ಒದಗಿಸುವ ಶಕ್ತಿ ಪಪ್ಪಾಯಿ ಎಲೆಗಳು ನೀಡುತ್ತದೆ. ಈ ವೇಳೆ ಕಾಡುವ ಜ್ವರ, ಆಯಾಸ, ತಲೆನೋವುಗಳನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ:
ಜೀರ್ಣಕ್ರಿಯೆ ಸಮಸ್ಯೆಯಿಂದ ಮಲಬದ್ಧತೆಯುಂಟಾಗಿದ್ದರೆ ಪಪ್ಪಾಯಿ ಎಲೆಗಳನ್ನು ಸೇವಿಸಿ. ಇದರಿಂದ ಗ್ಯಾಸ್, ಹೊಟ್ಟೆ ಉಬ್ಬಸ ಹಾಗೂ ಎದೆಯುರಿಗಳಂತ ಸಮಸ್ಯೆ ನಿವಾರಿಸುತ್ತದೆ.

ಕೂದಲ ಬೆಳವಣಿಗೆ:
ಪಪ್ಪಾಯಿ ಎಲೆಗಳ ರಸವನ್ನು ಕೂದಲಿ ಹಚ್ಉವುದರಿಂದ ಕೂದಲು ದಟ್ಟವಾಗಿ ಬೆಳೆಯೋದಕ್ಕೆ ಸಹಕಾರಿಯಾಗಲಿದೆ.

ಮಧುಮೇಹ:
ಪಪ್ಪಾಯಿ ಹಣ್ಣಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಕಡಿಮೆಗೊಳಿಸಿ, ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಸಲು ಸಹಕಾರಿಯಾಗಲಿದೆ.

ಕ್ಯಾನ್ಸರ್:
ಪಪ್ಪಾಯಿ ಹಣ್ಣು ಹಾಗೂ ಅದರ ಎಲೆಯ ರಸ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಸಮಸ್ಯೆಗಳಿಗೆ ರಾಮಭಾಣವಾಗಲಿದೆ.

ಉರಿಯೂತ:
ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಉರಿಯೂತ, ಸ್ನಾಯು ನೋವುಗಳು ಕಡಿಮೆಯಾಗುತ್ತದೆ. ಇದರಿಂದ ಕಾಲುಗಳಲ್ಲಿನ ಉರಿಯೂತಗಳು ನಿವಾರಣೆಯಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss