ಸೂರ್ಯಕಾಂತಿ ಎಣ್ಣೆಯನ್ನು ಎಲ್ಲರೂ ಅಡುಗೆಗೆ ಬಳಸೋದು ತಿಳಿದೇ ಇದೆ. ಆದರೆ ಇದರ ಬೀಜಗಳಲ್ಲಿನ ವಿಟಮಿನ್, ಕಬ್ಬಿಣಾಂಶ, ಪೊಟಾಶಿಯಂ ಗಳಿಂದ ಯಾವೆಲ್ಲಾ ಆರೋಗ್ಯಕರ ಗುಣಗಳಿವೆ ನೋಡೋಣ ಬನ್ನಿ..
ಇಮ್ಯುನಿಟಿ ಹೆಚ್ಚು: ಇದರಲ್ಲಿನ ವಿಟಮಿನ್ ಇ ಅಂಶವು ದೇಹವನ್ನು ಅನೇಕ ಸೋಂಕುಗಳಿಂದ ಪಾರು ಮಾಡುತ್ತದೆ ಜೊತೆಗೆ ನಿಮ್ಮ ಇಮ್ಯುನಿಟಿ ಹೆಚಿಸುತ್ತದೆ.
ಕೊಲೆಸ್ಟ್ರಾಲ್: ಸೂರ್ಯಕಾಂತಿ ಬೀಜದಲ್ಲಿನ ವಿಟಮಿನ್ ಬಿ3 ಅಂಶವು ದೇಹದಲ್ಲಿನ ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಹೃದಯ ಸಂಬಂಧಿ ತೊಂದರೆಗಳಿಂದ ಪಾರು ಮಾಡುತ್ತದೆ.
ಹೃದಯ: ಸೂರ್ಯಕಾಂತಿ ಬೀಜದಲ್ಲಿನ ಮೆಗ್ನೀಶಿಯಂ, ನಾರಿನಾಂಶವಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯ ಕಾಪಾಡುತ್ತದೆ.
ಕ್ಯಾನ್ಸರ್: ಇದರ ಸೇವನೆಯಿಂದ ಟ್ಯೂಮರ್ ಸೆಲ್ಸ್ ಗಳ ಗಾತ್ರ ಕಡಿಮೆ ಮಾಡುವುದರೊಂದಿಗೆ ಕ್ಯಾನ್ಸರ್ ನಂತಹ ಕಾಯಿಲೆಯಿಂದ ಪಾರು ಮಾಡುತ್ತದೆ.
ತೂಕ ಇಳಿಕೆ: ಸೂರ್ಯಕಾಂತಿ ಬೀಜದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅಂಶ ಹೊಂದಿದ್ದು, ಇದರಲ್ಲಿ ಕ್ಯಾಲೊರಿ ಅಂಶಗಳು ಕಡಿಮೆ ಇರಲಿದ್ದು, ತೂಕ ಇಳಿಕೆಗೆ ಸಹಕಾರಿಯಾಗಲಿದೆ.
ಚರ್ಮಕ್ಕೆ ಕಾಂತಿ: ಈ ಬೀಜಗಳು ಚರ್ಮದ ಕಾಂತಿ ಹೆಚ್ಚಿಸುವುದರೊಂದಿಗೆ ಮೊಡವೆ, ಸುಕ್ಕುಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಲಿದೆ.
ಉರಿಯೂತ: ಇದರಲ್ಲಿನ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಉರಿಯೂತ ನಿಯಂತ್ರಣಕ್ಕೆ ಬರಲಿದೆ.
ಕೂದಲು: ಇದರಲ್ಲಿರುವ ವಿಟಮಿನ್ ಅಂಶಗಳು ಕೂದಲು ದಟ್ಟ ಹಾಗೂ ಕಪ್ಪಾಗು ಬೆಳೆಯಲು ಸಹಕಾರಿಯಾಗಲಿದೆ.