ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅನಾನಸ್ ಹಣ್ಣು ಸೇವಿಸೋಕೆ ಇಷ್ಟ ಆಗೋದಿಲ್ವಾ? ರಸಭರಿತ ಪೈನಾಪಲ್ ನಲ್ಲಿದೆ ಸಖತ್ ಆರೋಗ್ಯಕರ ಗುಣಗಳು

ಕೆಲವರಿಗೆ ಅನಾನಸ್ ಹಣ್ಣಿನ ವಾಸನೆಯಂದರೇನೆ ಆಗೋದಿಲ್ಲ. ಮತ್ತೆ ಕೆಲವರಿಗೆ ಅದರ ರುಚಿ.. ಆದರೆ ನೆನಪಿಡಿ ಈ ಮುಳ್ಳು ದೇಹದ ಅನಾನಸ್ ನಲ್ಲಿದೆ ಅತಿ ಹೆಚ್ಚು ಆರೋಗ್ಯಕರ ಗುಣಗಳು…

ನೆಗಡಿ,ಕೆಮ್ಮು:
ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಅದರಲ್ಲಿರುವ ಬ್ರೊಮೆಲಿನ್ ಅಂಶು ದೇಹದಲ್ಲಿನ ಸೋಂಕಿನ ವಿರುದ್ಧ ಹೋರಾಡಲಿದೆ.

ಮೂಳೆಗಳಿಗೆ ಬಲ:
ಪ್ರತಿದಿನದ ಡಯಟ್ ಗೆ ಅನಾನಸ್ ಲಾಭದಾಯಕ. ಇದರಿಂದ ಮೂಳೆಗಳಿಗೆ ಅಗತ್ಯವಿರುವ ಜಿಂಕ್, ಕ್ಯಾಲ್ಶಿಯಂ, ಮ್ಯಾಂಗನೀಸ್ ಅಂಶಗಳು ಇರಲಿದ್ದು, ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ.

ಜೀರ್ಣಕ್ರಿಯೆ:
ಇದರಲ್ಲಿ ಹೆಚ್ಚಿನ ನಾರಿನಾಂಶ, ವಿಟಮಿನ ಸಿ ಅಂಶಗಳಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ.

ಕಣ್ಣಿಗೆ ಉತ್ತಮ:
ಪೈನಾಪಲ್ ನಲ್ಲಿ ಹೆಚ್ಚಿನ ವಿಟಮಿನ್ ಸಿ ಹಾಗೂ ಅನೇಕ ಆಂಟಿ ಆಕ್ಸಿಡೆಂಟ್ಸ್ ಇದ್ದು, ಇದು ಕಣ್ಣಿನ ದೃಷ್ಠಿ ಹೆಚ್ಚಿಸುತ್ತದೆ ಹಾಗೂ ಆರೋಗ್ಯ ಕಾಪಾಡುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ:
ಇದರಲ್ಲಿನ ಬ್ರೊಮೆಲಿನ್ ಅಂಶವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದನ್ನು ಆಹಾರಕ್ರಮದಲ್ಲಿ ಹೆಚ್ಚು ಬಳಸಬಹುದು.

ಚರ್ಮಕ್ಕೆ ಕಾಂತಿ:
ಮೊಡವೆ, ರ್ಯಾಷಸ್, ಚರ್ಮದ ತೊಂದರೆಯಿಂದ ಬಳಲುತ್ತಿದ್ದರೆ ಅವರು ಪೈನಾಪಲ್ ಸೇವಿಸುವುದು ಉತ್ತಮ. ಇದು ತ್ವಚೆಗೆ ಮತ್ತಷ್ಟು ಹೊಳಪು ನೀಡುವುದು.

ಕೂದಲು:
ಒಂದಲ್ಲಾ, ಎರಡಲ್ಲಾ ಪೈನಾಪಲ್ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶದಿಂದ ಕೂದಲು ಹೆಚ್ಚು ಬೆಳೆಯುವುದರ ಜೊತೆಗೆ ಮೃದು ಹಾಗೂ ದಪ್ಪವಾಗಿ ಬೆಳೆಯಲು ಸಹಕಾರಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss