Sunday, July 3, 2022

Latest Posts

ನಿಮ್ಮ ಪವರ್ ಬ್ಯಾಂಕ್ ತುಂಬಾ ಬೇಗ ಹಾಳಾಗುತ್ತಿದ್ಯಾ? ಹಾಗಿದ್ದರೆ ಅದನ್ನು ಮೇಂಟೇನ್ ಮಾಡೋಕೆ ಈ ರೀತಿ ಮಾಡಿ

ಈ ಕಾಲದಲ್ಲಿ ಪವರ್ ಬ್ಯಾಂಕ್ ನಮಗೆ ಸಖತ್ ಇಂಪಾರ್ಟೆಂಟ್ ಆಗಿದೆ. ನಮ್ಮ ಪ್ರತಿಯೊಂದು ಡೇಟಾ ಕೂಡ ಫೋನ್‌ನಲ್ಲಿರುತ್ತದೆ. ಮೊಬೈಲ್ ಬಿಟ್ಟು ಇರೋದು ತುಂಬಾ ಕಷ್ಟ. ಯಾವುದೋ ಅಗತ್ಯ ಸಮಸಯಕ್ಕೆ ಸರಿಯಾಗಿ ಮೊಬೈಲ್ ಚಾರ್ಜ್ ಖಾಲಿಯಾದರೆ ಬ್ಯಾಟರಿಯನ್ನು ಚಾರ್ಜ್ ಮಾಡಲು ಸಹಾಯ ಮಾಡೋದೆ ಪವರ್ ಬ್ಯಾಂಕ್. ಹಾಗಿದ್ದರೆ ಇದನ್ನು ಯಾವ ರೀತಿ ಮೇಂಟೇನ್ ಮಾಡಬೇಕು ನೋಡಿ…

  • ಪವರ್ ಬ್ಯಾಂಕ್ ಗಳನ್ನು ಹಚ್ಚು ಬಿಸಿಲಿನ ತಾಪಮಾನಕ್ಕೆ ಇಡಬೇಡಿ. ಇದರಿಂದ ಪವರ್ ಬ್ಯಾಂಕ್ ಬಿಸಿಯಾಗಿ ಸ್ಫೋಟವಾಗುವ ಸಾಧ್ಯತೆ ಇದೆ.
  • ಪವರ್ ಬ್ಯಾಂಕ್ ನಲ್ಲಿ ಚಾರ್ಜ್ ಹಾಕಿರುವಾಗಲೂ ಮೊಬೈಲ್ ಬಳಸಬೇಡಿ.
  • ಪೂರ್ತಿ ಚಾರ್ಜ್ ಖಾಲಿಯಾಗುವವರೆಗೂ ಪವರ್ ಬ್ಯಾಂಕ್ ಚಾರ್ಜ್ ಗೆ ಹಾಕಬೇಡಿ.
  • ಪವರ್ ಬ್ಯಾಂಕ್ ನ ಬ್ಯಾಟರಿ ಉಳಿಸಲು ಆಗಾಗ ಪವರ್ ಬ್ಯಾಂಕ್ ಬಳಸುತ್ತಿರಿ.
  • ಮೊಬೈಲ್ ಹಾಗೂ ಪವರ್ ಬ್ಯಾಂಕ್ ಎರಡನ್ನೂ ಒಟ್ಟಿಗೆ ಚಾರ್ಜ್ ಗೆ ಹಾಕಬೇಡಿ.
  • ಪವರ್ ಬ್ಯಾಂಕ್ ನಲ್ಲಿ ಸರ್ಕ್ಯೂಟ್ ಬೋರ್ಡ್ ಇರಲಿದೆ ಹಾಗಾಗಿ ಅದನ್ನು ಜೋಪಾನವಾಗಿ ಹಿಡದುಕೊಳ್ಳಿ. ಎಲ್ಲೂ ಬೀಳಿಸದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss