Wednesday, June 29, 2022

Latest Posts

ಹತ್ತು ರುಪಾಯಿಂದ ನೂರರತ್ತ ಜಿಗಿದ ಟೊಮಾಟೊ: ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ ಹೀಗಿದೆ ನೋಡಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಬೆಂಗಳೂರಿನಲ್ಲಿನ ತರಕಾರಿಗಳ ಬೆಲೆಯನ್ನು ತೋಟಗಾರಿಕೆ ಉತ್ಪಾದನೆ ಮಾರುಕಟ್ಟೆ ಮತ್ತು ಸಂಸ್ಕರಣೆ ನಿಗಮ ಬಿಡುಗಡೆ ಮಾಡಿದ್ದು.. ರೇಟ್ ಗಳ ಪಟ್ಟಿ ಇಲ್ಲಿದೆ
ದೊಣ್ಣೆಮೆಣಸಿನಕಾಯಿ- 65 ರೂ. ಕೆಜಿ
ಬಟಾಣಿ- 220 ರೂ. ಕೆ.ಜಿ.
ಕಡಲೆಬೀಜ- 135 ರೂ. ಕೆ.ಜಿ.
ಟೊಮಾಟೋ- 65 ರೂ. ಕೆ.ಜಿ.
ನುಗ್ಗೆಕಾಯಿ- 118 ರೂ. ಕೆ.ಜಿ.
ಇಷ್ಟು ದಿನ 10 ರೂ. ಕೆ.ಜಿ ಗೆ ಮಾರಾಟವಾಗುತ್ತಿದ್ದ ಟೊಮಾಟೋ ದರ ಮಳೆಯಿಂದಾಗಿ 65ಕ್ಕೆ ಏರಿಕೆಯಾಗಿದ್ದು, ಹೀಗೆ ಮಳೆ ಮುಂದುವರೆದರೆ 100 ರೂ. ಆಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ ನಲ್ಲಿ ಕೆ.ಜಿ. ಟೊಮಾಟೋ ದರ 15 ರೂ. ಇದಿದ್ದು, ಇದೀಗ ತರಕಾರಿ ಪೂರೈಕೆಯ ಕೊರತೆಯಿಂದಾಗಿ ಕೆ.ಜಿ ಟೊಮಾಟೋ ದರ ಶತಕದತ್ತ ನುಗ್ಗುತ್ತಿದೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮಳೆಯಿಂದಾಗಿ ಟೊಮಾಟೋ ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಇದರಿಂದಾಗಿ ಎಪಿಎಂಸಿಗೆ ಟೊಮಾಟೋ ಮಾರಾಟ ಶೇ.40ರಷ್ಟು ಇಳಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss