ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪತಿಯೇ ಪತ್ನಿ ಹಾಗೂ ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ಸೋಮವಾರ ಸಂಜೆ ನಡೆದಿದೆ.
ಮಂಜುಳಾ(28) ಮತ್ತು ಇವರ ತಾಯಿ ಭಾರತಿ(56) ಕೊಲೆಯಾದ ದುರ್ದೈವಿಗಳು. ಮಂಜುಳಾರ ಪತಿ ಶ್ರೀಧರ್ ಕೊಲೆ ಮಾಡಿದ ಆರೋಪಿ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಹಾಗೂ ಅತ್ತೆಯನ್ನು ಮನಸೋ ಇಚ್ಛೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಇದಕ್ಕೆ ಕಾರಣ ಮದುವೆಯಾಗಿದ್ದ ಮಂಜುಳಾಗೆ ರಂಗಾಪುರ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಜಮೀನಿನ ಬಳಿ ಪ್ರಿಯಕರನೊಂದಿಗೆ ಇದ್ದುದ್ದನ್ನು ಕಂಡ ಶ್ರೀಧರ ಆಕೆಯನ್ನು ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದ ಮಂಜುಳಾ ತಾಯಿ ಭಾರತಿಯನ್ನು ಶ್ರೀಧರ ಕೊಂದಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬಂದ ಗಂಡಸಿ ಠಾಣೆ ಪೊಲೀಸರು ಶ್ರೀಧರನನ್ನು ಬಂಧಿಸಿದ್ದಾರೆ.
ಮೃತ ಮಂಜುಳಾ ಹಾಗೂ ಆರೋಪಿ ಶ್ರೀಧರನಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಅನಾಥರಾಗಿದ್ದಾರೆ.