Thursday, August 18, 2022

Latest Posts

ಯಾವ ಬಟ್ಟೆ ಯಾವಾಗ ಒಗೆಯಬೇಕು? ತಜ್ಞರೇ ಉತ್ತರ ಕೊಡ್ತಾರೆ ನೋಡಿ‌‌‌…

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರತಿದಿನ ಬಟ್ಟೆ ಒಗೆಯೋದೆ ಹಲವರಿಗೆ ಗೋಜಿನ ಕೆಲಸ. ವಾಷಿಂಗ್ ಮಷೀನ್ ಇದ್ದರೂ ಕೂಡ  ಬಟ್ಟೆ ಒಗೆಯೋದಿಲ್ಲ ಅಂತ ಅಮ್ಮಂದಿರ ಹತ್ತಿರ ಬೈಸ್ಕೊಳ್ಳೋದು ಕಾಮನ್ ಆಗ್ಬಿಟ್ಟಿದೆ.
ಆದರೆ ನೆನಪಿಡಿ ನಿಮ್ಮ ಜೀನ್ಸ್, ಕುರ್ತಾಗಳನ್ನು ಪ್ರತಿದಿನ ತೊಳೆಯಬಾರದಂತೆ. ಹಾಗಂತ ಹೇಳಿದ್ದು ನಾನಲ್ಲ ರೀ.. ಸೊಸೈಟಿ ಆಫ್ ಕೆಮಿಕಲ್ ಇಂಡಸ್ಟ್ರಿಯ ತಜ್ಞರು ಹೇಳಿರೋದು.
ಹೂ.. ಈ ಬಗ್ಗೆ ವರದಿ ಮಾಡಿರುವ ಸಂಸ್ಥೆ ಯಂತ್ರಗಳ ಮೂಲಕ ಬಟ್ಟೆ ಒಗೆಯುವುದರಿಂದ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ನಿಮ್ಮ ಬಟ್ಟೆಗಳನ್ನು ಎಷ್ಟು ಬಾರಿ ಒಗೆಯಬೇಕು ಅಂತ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

  • ಪೈಜಾಮ- ವಾರಕ್ಕೆ ಒಮ್ಮೆ
  • ಜೀನ್ಸ್- ತಿಂಗಳಿಗೊಮ್ಮೆ
  • ಟಾಪ್- ಟೀ ಶರ್ಟ್: 5 ಬಾರಿ ಧರಿಸಿದ ನಂತರ ಒಗೆಯಬೇಕು.
  • ಒಳ ಉಡುಪು- ಉಟ್ಟ ಪ್ರತಿ ಬಾರಿ ತೊಳೆಯಬೇಕು.

ಹಾಗೂ ಈ ಬಟ್ಟೆಗಳನ್ನು ಮಷೀನ್ ಗಳಲ್ಲಿ ಹಾಕುವ ಬದಲಿಗೆ ಕೈಗಳಿಂದ ತೊಳೆಯೋದು ರೂಢಿ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಸಮಯ, ಹಣ, ಪರಿಸರ ಎಲ್ಲವೂ ಉಳಿಯುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!