spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್ ವರ್ಡ್ ಗಳು ಯಾವುವು ಗೊತ್ತಾ? ಇಲ್ಲಿದೆ ಶಾಕಿಂಗ್ ರಿಪೋರ್ಟ್

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ನಲ್ಲಿ ವಿಶ್ವದ ಬಹುತೇಕ ದೇಶಗಳು ಡಿಜಿಟಲ್ ವ್ಯವಹಾರಕ್ಕೆ ಮಾರುಹೋಗಿವೆ. ಶಾಪಿಂಗ್, ಪೇಮೆಂಟ್ ಎಲ್ಲವೂ ಡಿಜಿಟಲೀಕರಣವಾಗಿದೆ. ಆದರೆ ಈ ವೇಳೆ ನಾವು ಬಳಸುವ ಪಾಸ್ ವರ್ಡ್ ಎಷ್ಟರ ಮಟ್ಟಿಗೆ ಸ್ಟ್ರಾಂಗ್ ಆಗಿ ಇರಲಿದೆ ಅಂತ ಗೊತ್ತಾ? ಇಲ್ಲಿದೆ ನೋಡಿ ಹೊಸ ಶಾಕಿಂಗ್ ವರದಿ..

ಭಾರತದಲ್ಲಿ ಬಳಸುವ ಪಾಸ್ ವರ್ಡ್ ಗಳ ಬಗ್ಗೆ ನರ್ಡ್ ಪಾಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ವರದಿ ಈಗ ಬೆಳಕಿಗೆ ಬಂದಿದೆ.
ದೇಶದಲ್ಲಿ ಪೊಲೀಸ್ ಹಾಗೂ ಇತರೆ ಸಂಸ್ಥೆಗಳ ಎಚ್ಚರಿಕೆಯ ಬಳಿಕವೂ ಭಾರತದಲ್ಲಿ ಈ ರೀತಿಯ ಸುಲಭ ಪಾಸ್ ವರ್ಡ್ ಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್ ವರ್ಡ್ ಗಳಲ್ಲಿ ಈ ಸಂಖ್ಯೆಗಳೇ ಹೆಚ್ಚಂತೆ..
12345, 123456, 123456789, 12345678, India123, 1234567890, 1234567, qwerty ಮತ್ತು abc123.. ಇವೆಲ್ಲಾ ಪಾಸ್ ವರ್ಡ್ ಗಳು ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತವೆಯಂತೆ.

ಅದರಲ್ಲಿ India123 ಹೊರತುಪಡಿಸಿ ಮಿಕ್ಕ ಎಲ್ಲಾ ಪಾಸ್ ವರ್ಡ್ ಗಳನ್ನು ಒಂದು ಸೆಕೆಂಡ್ ಗೂ ಮುನ್ನವೇ ಕ್ರ್ಯಾಕ್ ಮಾಡಬಹುದು. India123 ಕ್ರ್ಯಾಕ್ ಮಾಡೋಕೆ 17 ನಿಮಿಷ ಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ನಾರ್ಡ್ ಪಾಸ್ ನ ಸಿಇಒ ಜೋನಾಸ್ ಕಾರ್ಕ್ಲಿಸ್, ನಾವು ಹೆಚ್ಚು ಸಮಯ ಆನ್ ಲೈನ್ ನಲ್ಲಿ ಕಳೆಯುತ್ತಿರುವುದರಿಂದ ನಮ್ಮ ಸೈಬರ್ ಸೆಕ್ಯುರಿಯನ್ನೂ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ಸಾಕಷ್ಟು ಬಾರಿ ಪಾಸ್ ವರ್ಡ್ ವೀಕ್ ಆಗಿದ್ದರೂ ಕೂಡ ಜನರು ಅವನ್ನು ಹೊರತುಪಡಿಸಿ ಬೇರೆ ಸ್ಟ್ರಾಂಗ್ ಪಾಸ್ ವರ್ಡ್ ಕೊಡೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನರ್ಡ್ ಪಾಸ್ ವಿಶ್ವದ 50 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಈ ಎಲ್ಲಾ ರಾಷ್ಟ್ರಗಳಲ್ಲಿಯೂ 123456, 123456789 ಮತ್ತು 12345 ಪಾಸ್ ವರ್ಡ್ ಗಳೇ ಹೆಚ್ಚು ಬಳಕೆಯಲ್ಲಿದೆ. ಒಂದೇ ರೀತಿಯ ಪಾಸ್ ವರ್ಡ್ ಬಳಸುವುದರಿಂದ ನಮ್ಮ ಖಾತೆ ತುಂಬಾ ಬೇಗ ಹ್ಯಾಕರ್ಸ್ ನ ಕೈ ಸೇರಲಿದೆ ಎಂದು ಎಚ್ಚರಿಕೆ ನೀಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss