Wednesday, June 29, 2022

Latest Posts

ತುಂಟ ಗಿಳಿಯ ಕಾಟಕ್ಕೆ ಜಿಗಿದು ಪರಾರಿಯಾದ ಬೆಕ್ಕು: ಇಲ್ಲಿದೆ ನೋಡಿ ವೈರಲ್ ವಿಡಿಯೋ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರಾಣಿಗಳ ಪ್ರತಿಯೊಂದು ಚಲನವಲನಗಳು ಜನರಿಗೆ ತುಂಬಾ ಇಷ್ಟಾ ಆಗುತ್ತೆ, ಆದರಲ್ಲೂ ಕೆಲವೊಂದಷ್ಟು ಕೀಟಲೇ ಮಾಡುವ ಮುದ್ದು ಜೀವಿಗಳು ಹೆಚ್ಚು ಜನಪ್ರೀಯತೆ ಪಡೆಯುತ್ತಿದೆ.
ಅಂತಹದ್ದೇ ಒಂದು ತುಂಟ ಗಿಳಿ ಹಾಗೂ ಬೆಕ್ಕಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮ್ಯಾಕ್ & ಮಿಕ್ಕಿ ಕಾಮಿಡಿ ಟ್ವಿಟರ್ ಪುಟದಿಂದ ಶೇರ್ ಮಾಡಲಾಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಏನಿದೆ ವಿಡಿಯೋದಲ್ಲಿ? ಬಾಗಿಲ ಹತ್ತಿರ ಕುಳಿತಿದ್ದ ಬೆಕ್ಕು ಹಾಗೂ ಅದರ ಹಿಂದೆ ಮೆಲ್ಲನೆ ನಡೆದು ಬರುತ್ತಿರುವ ಗಿಳಿಯಿಂದ ವಿಡಿಯೋ ಆರಂಭವಾಗುತ್ತದೆ. ಸುಮ್ಮನೆ ಕುಳಿತಿದ್ದ ಬೆಕ್ಕುವನ್ನು ಒಮ್ಮೆ ದಿಟ್ಟಿಸಿ ನೋಡುತ್ತದೆ. ಆದರೆ ಬೆಕ್ಕು ಹಿಂದೆ ನೋಡಲಿಲ್ಲ. ಆಗ ಈ ಗಿಳಿಯ ಆಟ ಶುರು. ಮೆಲ್ಲನೆ ಬೆಕ್ಕುವಿನ ಬಾಲವನ್ನು ತನ್ನ ಕೊಕ್ಕಿಯಿಂದ ಕಚ್ಚಲು ಪ್ರಯತ್ನಿಸುತ್ತೆ. ಒಮ್ಮೆ ಬೆಕ್ಕು ತಿರುಗಿ ನೋಡಿ ಸುಮ್ಮನಾಗುತ್ತದೆ. ಆಗ ಬೆಕ್ಕು ಬಾಲ ಅಲುಗಾಡಿಸುತ್ತಿದ್ದರಿಂದ ಕಚ್ಚಲು ಸಾಧ್ಯವಾಗಿಲ್ಲ. ಕೊನೆಯಲ್ಲಿ ಇನ್ನೇನು ಬೆಕ್ಕಿನ ಬಾಲವನ್ನು ಕಚ್ಚಬೇಕು ಅನ್ನುವಾಗ  ಕ್ಷಣಾರ್ಧದಲ್ಲಿ ಬೆಕ್ಕು ಜಿಗಿದು ಪರಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss