Sunday, August 14, 2022

Latest Posts

ಹವಾಮಾನ ಬದಲಾವಣೆ: 11 ತೀವ್ರ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಉತ್ತರ ಮತ್ತು ದಕ್ಷಿಣ ಎರಡೂ ಭಾಗಗಳಲ್ಲಿ ಮಹಾಮಳೆ ಜನರನ್ನು ತತ್ತರಿಸುವಂತೆ ಮಾಡಿದೆ. ಅದರ ಬೆನ್ನಿಗೇ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹವಾಮಾನ ಬದಲಾವಣೆಯಿಂದಾಗುವ ತೀವ್ರ ಬಾಧಿತವಾಗಲಿರುವ 11 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ.
ಅಮೆರಿಕದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಪ್ರಕಟಿಸಿದ ವರದಿಯು ಈ ವಿಚಾರವನ್ನು ಒಳಗೊಂಡಿದೆ. ಹವಾಮಾನ ಬದಲಾವಣೆ ಕುರಿತ ಮೊದಲ ವರದಿಯಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಕೂಡ 2040ರ ವರೆಗೂ ಅಪಾಯ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪರಿಸರಾತ್ಮಕ ಮತ್ತು ಸಾಮಾಜಿಕ ಬಿಕ್ಕಟ್ಟಿಗೆ 11 ದೇಶಗಳು ತೀವ್ರ ಸಂಕಷ್ಟ ಎದುರಿಸಲಿವ ಎಂದು ವರದಿ ಹೇಳಿದೆ. ಭಾರತದ ಜೊತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಮಾಯನ್ಮಾರ್, ಉತ್ತರ ಕೊರಿಯಾ, ಹೈಟಿ, ಕೊಲಂಬಿಯಾ, ಇರಾಕ್, ಕೆರಿಬಿಯನ್, ಗ್ವಾಟೆಮಾಲಾ, ಹೊಂಡುರಾಸ್ ದೇಶಗಳು ಸೇರಿವೆ. ಮಧ್ಯ ಆಫ್ರಿಕಾ ಮತ್ತು ಫೆಸಿಫಿಕ್‌ನ ಸಣ್ಣ ರಾಜ್ಯಗಳು ಸಹ ಅಪಾಯದಲ್ಲಿವೆ.
ಜಾಗತಿಕ ತಾಪಮಾನ ಏರಿಕೆಯನ್ನು ನಿರ್ಧರಿಸುವಲ್ಲಿ ಭಾರತ ಹಾಗೂ ಚೀನಾ ಪ್ರಮುಖ ಪಾತ್ರ ವಹಿಸಲಿವೆ. ಇವು ಅತ್ಯಧಿಕ ಹಾಗೂ ನಾಲ್ಕನೇ ಗರಿಷ್ಠ ಹೊಗೆ ಉಗುಳುವ ದೇಶಗಳಾಗಿವೆ ಮತ್ತು ಇದು ಏರಿಕೆಯಾಗುತ್ತಲೇ ಇದೆ. ಈ ದೇಶಗಳು ಕಲ್ಲಿದ್ದಲು ಬಳಕೆಯನ್ನು ಕಡಿತಗೊಳಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದೆಡೆ ಇದು ಈ ದೇಶಗಳಿಗೆ ಅಗ್ಗದ ವಿದ್ಯುತ್ ಮೂಲವಾಗಿದ್ದರೆ, ಇನ್ನೊಂದೆಡೆ ಹಲವು ಮಂದಿ ಉದ್ಯೋಗಕ್ಕಾಗಿ ಕಲ್ಲಿದ್ದಲು ಉದ್ಯಮವನ್ನು ಅವಲಂಬಿಸಿದ್ದಾರೆ. ಜಾಗತಿಕ ತಾಪಮಾನ ಭೌಗೋಳಿಕ ಹಾಗೂ ರಾಜಕೀಯ ಸಂಘರ್ಷಗಳಿಗೂ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನ, ಅಫ್ಘಾನಿಸ್ತಾನ, ಭಾರತ ಸೇರಿದಂತೆ 11 ದೇಶಗಳು ಅಧಿಕ ಉಷ್ಣಾಂಶ, ಹವಾಮಾನ ವೈಪರೀತ್ಯ, ಸಾಗರಗಳ ಗತಿಯಲ್ಲಿ ವ್ಯತ್ಯಯದಂಥ ಸಮಸ್ಯೆಗಳನ್ನು ಎದುರಿಸಲಿವೆ. ಇದು ವಿದ್ಯುತ್, ಆಹಾರ, ನೀರು ಮತ್ತು ಆರೋಗ್ಯ ಭದ್ರತೆ ಮೇಲೆ ಪರಿಣಾಮ ಬೀರಲಿದೆ. ಪದೇ ಪದೇ ತೀವ್ರ ಚಂಡಮಾರುತಗಳು ಜಲಮೂಲಗಳನ್ನು ಮಲಿನಗೊಳಿಸಲಿವೆ ಎಂದು ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss