ಪ್ರಧಾನಿ ಪಟ್ಟ ಅಲಂಕರಿಸಲು ಇನ್ನಷ್ಟು ಹತ್ತಿರ: 4ನೇ ಸುತ್ತಿನಲ್ಲಿ ಗೆಲುವು ಸಾಧಿಸಿದ ರಿಷಿ ಸುನಕ್!​​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರಿಟನ್​ ಪ್ರಧಾನಿ ಹುದ್ದೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್​​ ಇದೀಗ 4ನೇ ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಪಿಎಂ ರೇಸ್​​ನಲ್ಲಿ ಮತ್ತಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ.
ಸದ್ಯ ಸ್ಪರ್ಧಾಳುಗಳ ಸಂಖ್ಯೆ 5ರಿಂದ 3ಕ್ಕೆ ಇಳಿಕೆಯಾಗಿದ್ದು, ಮುಂಚೂಣಿಯಲ್ಲಿ ರಿಷಿ ಸುನಕ್​ ಇದ್ದಾರೆ.ರಿಷಿ ಸುನಕ್​​ 118 ಮತ ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ.
ಇಂದು ನಡೆದ 4ನೇ ಸುತ್ತಿನಲ್ಲಿ ರಿಷಿ ಸುನಕ್​ 118 ಮತ ಪಡೆದುಕೊಂಡಿದ್ದು, ಪೆನ್ನಿ ಮೊರ್ಡಾಂಟ್​ 92 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ 86 ಮತ ಪಡೆದುಕೊಂಡಿದ್ದಾರೆ. ಶಾಸಕ ಕೆಮಿ ಬಡೆನೊಚ್​ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು.ಸೆಪ್ಟೆಂಬರ್ 5 ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೂ ಅವರು ಪ್ರಧಾನ ಮಂತ್ರಿಯಾಗಿಯೇ ಇರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!