ಅಮರನಾಥದಲ್ಲಿ ಮೇಘಸ್ಪೋಟ: ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮರನಾಥ ಗುಹೆ ಪ್ರವೇಶದಲ್ಲಿ ಮೇಘಸ್ಪೋಟ ಸಂಭವಿಸಿ ಅಧಿಕ ಮಂದಿ ಸಾವನ್ನಪಿದ್ದಾರೆ. ಇದೀಗ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಬಗ್ಗೆ ಅವರ ಕುಟುಂಬಸ್ಥರು ಆತಂಕಕ್ಕಿಡಾಗಿದ್ದಾರೆ .
ಇನ್ನು ಅಮರನಾಥ ಯಾತ್ರೆಗೆ ರಾಜ್ಯದಿಂದಲ್ಲೂ ಹಲವಾರು ಜನ ತೆರಳಿದ್ದು, ಹಲವರ ಕುರಿತು ಮಾಹಿತಿ ಲಭ್ಯವಾಗಿದ್ದರೆ, ಇನ್ನು ಕೆಲವರ ಮಾಹಿತಿ ಇನ್ನು ಸಿಕ್ಕಿಲ್ಲ.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದು, ಅಮರನಾಥ ಯಾತ್ರೆಗೆ ಪ್ರಾಥಮಿಕ ಮಾಹಿತಿ ಪ್ರಕಾರ ನಮ್ಮ ರಾಜ್ಯದ 100 ಕ್ಕೂ ಹೆಚ್ಚು ಯಾತ್ರಾರ್ಥಿಗಳು ತೆರಳಿದ್ದಾರೆ. ಆ ಯಾತ್ರಾರ್ಥಿಗಳೆಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ತೊಂದರೆಯಲ್ಲಿ ಆ ಯಾತ್ರಾರ್ಥಿಗಳು ಎಲ್ಲಿಯೂ ಸಿಲುಕಿಕೊಂಡಿರುವ ಸುದ್ದಿ ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ರಾಜ್ಯದಲ್ಲೂ ನಾವು ಯಾತ್ರಾರ್ಥಿಗಳಿಗಾಗಿ ಹೆಲ್ಪ್‌ ಲೈನ್ ತೆರೆಯಲಾಗಿದೆ. ಈಗಾಗಲೇ ಈ ಹೆಲ್ಪ್ ಲೈನ್‌ನಿಂದ 15 ರಿಂದ 20 ಜನ ಮಾಹಿತಿ ಪಡೆದುಕೊಂಡಿದ್ದಾರೆ. ಕೂಡಲೇ ರಕ್ಷೆಣೆ‌ ಮಾಡುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಲಿದೆ. ಶ್ರೀನಗರದ ಅಮರನಾಥ ಮೇಘಸ್ಪೋಟವಾದ ಸ್ಥಳದಲ್ಲಿ ಕೇಂದ್ರ ರಕ್ಷಣಾ ಪಡೆ ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸ್ಥಳದಲ್ಲೇ ಮೊಕ್ಕಾಂ ಹೊಡಿದ್ದಾರೆ. ಅಲ್ಲಿನ ಸ್ಥಳೀಯ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಸಹಾಯವಾಣಿಯ ವಿವರ:
ಎನ್.ಡಿ.ಆರ್.ಎಫ್: 011-23438252, 011-23438253
ಕಾಶ್ಮೀರ್ ಡಿವಿಷನಲ್ ಹೆಲ್ಪ್ ಲೈನ್: 0914- 2496240
ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!