Monday, December 11, 2023

Latest Posts

ಕ್ಲಬ್ ಕೇವಲ ಆಟೋಟಗಳಿಗೆ ಸೀಮಿತವಾಗಿರದೆ ಊರಿನ ಜನತೆಯ ಒಳಿತಿಗಾಗಿ ದುಡಿಯುತ್ತಿರಲಿ: ವಿನೋದ್ ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಯುವಕರು ಒಗ್ಗಟ್ಟಿನಿಂದ ಬೆರೆತು ವಿವಿಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವುದರಿಂದ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದಂತಾಗುತ್ತದೆ. ಕ್ಲಬ್ ಎಂದರೆ ಕೇವಲ ಆಟೋಟಗಳಿಗೆ ಸೀಮಿತವಾಗಿರದೆ ಊರಿನ ಜನತೆಯ ಒಳಿತಿಗಾಗಿಯೂ ದುಡಿಯುತ್ತಿರಬೇಕು. ಇಂದು ಈ ಸಂಘಟನೆಯು ತನ್ನ ಸದಸ್ಯನ ಮನೆಯಲ್ಲಿ ಶ್ರಮದಾನವನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಬದಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ವಿನೋದ್ ಕುಮಾರ್ ಹೇಳಿದರು.
ಮಾರ್ಪನಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಹಾಗೂ ಜೈಹಿಂದ್ ಜಯನಗರ ಇವರು ಸಂಯುಕ್ತವಾಗಿ ಆಚರಿಸಿದ ಪರಿಸರ ದಿನಾಚರಣೆ ಹಾಗೂ ಶ್ರಮದಾನ ಕಾರ್ಯಕ್ರಮದ ಸಂದರ್ಭದಲ್ಲಿ ಸದಸ್ಯರಿಗೆ ಗಿಡವನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಸಕ್ರಿಯ ಸದಸ್ಯ ಶಿವಪ್ರಸಾದ್ ಮಾರ್ಪನಡ್ಕ ಅವರ ಮನೆಯ ಕಾಮಗಾರಿ ಕೆಲಸಗಳನ್ನು ಶ್ರಮಾದಾನದ ಮೂಲಕ ಮಾಡಲಾಯಿತು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಹಾಗೂ ಪೊಲೀಸ್ ಸಿಬ್ಬಂದಿ ಸತೀಶ್ ಅವರ ನೇತೃತ್ವದಲ್ಲಿ ಆಗಮಿಸಿದ ಜನಮೈತ್ರಿ ಪೊಲೀಸ್ ತಂಡ ಕ್ಲಬ್‌ನ ಸದಸ್ಯರ ಜನಪರ ಕಾಳಜಿಯ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!