Thursday, August 11, 2022

Latest Posts

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನಾಚರಣೆ: ಅಭಿಮಾನಿಗಳಿಂದ ವಿಶೇಷ ಪೂಜೆ

ಹೊಸದಿಗಂತ ವರದಿ, ಬಳ್ಳಾರಿ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಿ.ಎಸ್.ವೈ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲದಲ್ಲಿ ಶನಿವಾರ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು.

ದೇಗುಲದ ಬಳಿ ಜಮಾಯಿಸಿದ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇಗುಲ ಎದುರು ತೆಂಗಿನಕಾಯಿ ಒಡೆದು ಬಿಎಸ್ ವೈ ಅವರಿಗೆ ಆರೋಗ್ಯ, ಆವಿಷ್ಯವನ್ನು ದೇವಿ‌ ನೀಡಲಿ, ರಾಜಕೀಯದಲ್ಲಿ ಇನ್ನೂ ಉನ್ನತಮಟ್ಟಕ್ಕೆ ತೆರಳಿ ರಾಜ್ಯದ ಜನರ ಸೇವೆ ಮಾಡಲಿ ಎಂದು ಪ್ರಾರ್ಥಿಸಿದರು.

ಇದಕ್ಕೂ ಮುನ್ನ ದೇಗುಲ ಎದುರು ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಹಿಡಿದು ಜೈಕಾರ ಕೂಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ಅವರು ಮಾತನಾಡಿ, ನಮ್ಮ ಜನಮೆಚ್ಚಿದ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಲ್ಲಿವರೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಡೀ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬರುವ ದಿನಗಳಲ್ಲಿ ಬಿ.ಎಸ್.ವೈ. ಅವರು ಇನ್ನೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಭಾಜಪ ಯುವ ಮೊರ್ಚಾ ಕಾರ್ಯದರ್ಶಿ ಸಿದ್ದೇಶ ಕುಮಾರ್, ಮುಖಂಡರಾದ ಪಲ್ಲೇದ ದೊಡ್ಡಪ್ಪ, ಸುಮಾ ರೆಡ್ಡಿ, ರಾಮಚಂದ್ರಯ್ಯ, ರೈತ ಮೋರ್ಚಾ ಜಿಲ್ಲಾದ್ಯಕ್ಷ ಐನಾಥ್ ರೆಡ್ಡಿ, ಚನ್ನದಾ ಅಮರೇಶ್, ಶ್ರೀಧರಗಡ್ಡೆ ಕಟ್ಟೆಬಸವ, ರಾಜಶೇಖರ್, ಗುರುಲಿಂಗಪ್ಪ, ಏಳುಬೆಂಚೆ ಬಸವರಾಜ್, ಗುರು, ಈಶ್ವರಗೌಡ, ಕಲ್ಪನಮ್ಮ, ಉಮಾ ದೇವಿ, ಸರೋಜಮ್ಮ, ಲಲಿತಾ, ಭಾಗ್ಯಮ್ಮ ಸೇರಿದಂತೆ ಇತರರು .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss