spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಲ್ಯಾಣ ಕನಾ೯ಟಕದ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ

- Advertisement -Nitte

ಹೊಸ ದಿಗಂತ ವರದಿ, ಕಲಬುರಗಿ:

ಕಲ್ಯಾಣ ಕನಾ೯ಟಕದ ಉತ್ಸವದ ದಿನಾಚರಣೆ ಅಂಗವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಆಗಮಿಸಲಿದ್ದಾರೆ.

ಸೆ.17ರಂದು ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ ಕಲಬುರಗಿ ಗೆ ಆಗಮಿಸಲಿದ್ದು, ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಸದಾ೯ರ್ ವಲ್ಲಭಭಾಯಿ ಪಟೇಲ್ ಅವರ ಪುತ್ತಳಿಗೆ ಮಾಲಾಪ೯ಣೆ ಮಾಡಲಿದ್ದಾರೆ.

ಕಲ್ಯಾಣ ಕನಾ೯ಟಕ ಉತ್ಸವ ದಿನಾಚರಣೆ ಅಂಗವಾಗಿ ನಗರದ ಪೋಲಿಸ್ ಪರೇಡ್ ಮೈಧಾನದಲ್ಲಿ ದ್ವಜಾರೋಹಣ ನೆರವೆರಿಸುವರು.

ನಂತರ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಮತ್ತು ಲೋಕಾಪ೯ಣೆ, ಬೃಹತ್ ಪ್ರಮಾಣದ ಲಸಿಕೆ ನೀಡುವ ಕಾಯ೯ಕ್ರಮ ಹಾಗೂ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಪ್ರಗತಿ ಕೇಂದ್ರ ಹಾಗೂ ಸಾಂಸ್ಕೃತಿಕ ಕೇಂದ್ರಗಳಿಗೆ ಚಾಲನೆ ( ಆನಲೈನ ಮೂಲಕ) ನೀಡಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಕಾಳನೂರ ಗ್ರಾಮದ ಕಾಳಿಂಗೇಶ್ವರ ದೆವಸ್ಥಾನದ ನೂತನ ಕಟ್ಟಡದ ಉದ್ವಾಟನೆಯಲ್ಲಿ ಭಾಗವಹಿಸುವರು.

ತದನಂತರ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಗೆ ತೆರಳುವರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss