ಆಯಸಿಡ್ ದಾಳಿಗೆ ಒಳಗಾಗದವರಿಗೆ ನಿವೇಶನ, 10 ಸಾವಿರ ಮಾಸಾಶನ: ಸಿಎಂ ಬೊಮ್ಮಾಯಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಯಸಿಡ್ ದಾಳಿಗೆ ಒಳಗಾದ ಹೆಣ್ಣುಮಕ್ಕಳಿಗೆನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಮಾಸಾಶನವನ್ನು 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಜೊತೆಗೆ ನಿವೇಶನ ಇಲ್ಲದವರಿಗೆ ನಿವೇಶನ ಕೊಟ್ಟು ಮನೆ ನಿರ್ಮಿಸಿಕೊಡಲಾಗುತ್ತದೆ. ಸ್ವ ಉದ್ಯೋಗ ಕೈಗೊಳ್ಳೋ ನಿಟ್ಟಿನಲ್ಲಿ 5 ಲಕ್ಷ ಸಹಾಯ ಧನ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಇಂದು ಹೆಲೋ ಸಚಿವರೇ ಸಹಾಯವಾಣಿಗೆ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅವರು, ಆಯಸಿಡ್ ದಾಳಿಗೆ ಒಳಗಾದಮ್ಮ ಅಕ್ಕ-ತಂಗಿಯರ ಬದುಕು ಬಹಳ ಕಷ್ಟ. ಅವರು ಮಾನಸಿಕವಾಗಿ ಹೇಗೆ ತಡೆದುಕೊಳ್ಳುತ್ತಾರೋ ಅನ್ನುವಂತದ್ದು ನನಗೆ ಬರೀ ಯೋಚನೆ ಮಾಡಿದ್ರೇ ದುಖವಾಗಲಿದೆ. ಬರೀ ನಮ್ಮ ಕಣ್ಣಲ್ಲಿ ಏನಾದ್ರೂ ಹೋದ್ರೆ ಚಡಪಡಿಸುತ್ತೇವೆ. ಸಣ್ಣ ದೂಳಿನ ಕಣ ಹೋದ್ರೆ ನೋವು ಪಡೆಯುತ್ತೇವೆ ಎಂದರು.
ಆಯಸಿಡ್ ದಾಳಿಗೊಳಗಾದ ಅನೇಕರು ಕಣ್ ಕಳೆದುಕೊಂಡಿದ್ದಾರೆ. ಆಹಾರ ಸೇವಿಸೋದಕ್ಕೆ ಆಗೋದಿಲ್ಲ. ಊಟ ಸೇರೋದಿಲ್ಲ. ಉಸಿರಾಡೋದಕ್ಕೂ ಸಮಸ್ಯೆ. ಹೀಗೆ ದಾಳಿಗೊಳಗಾದಂತ ಅನೇಕರನ್ನು ಭೇಟಿಯಾಗಿದ್ದೇನೆ. ಪುರುಷ ಪ್ರಧಾನ ಸಮಾಜ ಅವರನ್ನು ರಕ್ಷಣೆ ಮಾಡಬೇಕು. ದಾಳಿಗೆ ಒಳಗಾಗಿದ್ದರೂ ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬದುಕಿನ ಬಗ್ಗೆ ಎಷ್ಟು ಆತ್ಮಸ್ಥೈರ್ಯ ಇರಬೇಕು ಎಂದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!