ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಷನ್ ನಿರ್ಮಿಸಿದ ನಾಗಮಂಟಪ ಉದ್ಘಾಟಿಸಿದ ಸಿಎಂ ಬೊಮ್ಮಾಯಿ 

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:
ಮಾನವ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ಸರಕಾರದ ಸಹಕಾರ ಸದಾ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕರವನಹಳ್ಳಿ ಸಮೀಪ ಈಶಾ ಫೌಂಡೇಷನ್ ವತಿಯಿಂದ ನಿರ್ಮಿಸಲಾಗುತ್ತಿರುವ ಆದಿಯೋಗಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ನಾಗಮಂಟಪವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಶಾ ಫೌಂಡೇಷನ್‌ನ ಆದಿಯೋಗಿಯ ಈ ಕ್ಷೇತ್ರ ಅಂತರಾಷ್ಟ್ರೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ಕರ್ನಾಟಕದ ಸದ್ಗುರು ಜಗ್ಗಿವಾಸುದೇವ್ ಜಾಗತಿಕ ಗುರುಗಳಾಗಿದ್ದಾರೆ ಎಂದು ಬಣ್ಣಿಸಿದರು. ಮಣ್ಣು ಉಳಿಸು ಅಭಿಯಾನ ಪರಿಸರ ಉಳಿಸಲು ಪೂರಕವಾಗಿದೆ. ಸದ್ಗುರು ನೀಡಿರುವ ಪುಸ್ತುಕದ ಆಧ್ಯಯನ ಮಾಡಿ ಈಗಾಗಲೇ ಪರಿಸರ ಮಾಲಿನ್ಯ ಇಲಾಖೆಗೆ ನೀಡಲಾಗಿದ್ದು, ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಅಂತರಾಳದ ವಿಚಾರಕ್ಕೆ ಬಳಕೆ ಮಾಡಿದ್ದಕ್ಕೆ ಸದ್ಗುರು ಒಳ್ಳೆ ಜಗತ್ತು ನೋಡಿದ್ದಾರೆ. ಅವರು ನೋಡಿದ ಒಳ ಜಗತ್ತನ್ನು ಜನಕ್ಕೆ ತೋರಿಸಲು ಮುಂದಾಗಿದ್ದಾರೆ. ಸದ್ಗುರು ಸೃಷ್ಟಿಕರ್ತ. ಅವರಲ್ಲಿ ಕಲಕಾರರು ಇದ್ದಾರೆ. ಮನವೀಯ ಗುಣ, ವಿಜ್ಞಾನಿಯನ್ನು ಕಂಡಿದ್ದೇನೆ.
ಲೋಕಕಲ್ಯಾಣಕ್ಕಾಗಿ ಅವರು ಇಲ್ಲೇ ಯಾಕೆ ಮಾಡಬೇಕಿತ್ತು. ಜನ ಸಾಮಾನ್ಯರ ಮಿತಿ ಗೊತ್ತಿದೆ. ಜ್ಞಾನದಿಂದ, ಕರ್ಮದಿಂದ, ದ್ಯಾನದಿಂದ ಸಾಧನೆ ಮಾಡುವವರಿಗೆಲ್ಲ ಇಲ್ಲಿ ಅವಕಾಶ ಇದೆ. ಇದು ಬಹಳ ಅದ್ಬುತವಾದ ಕಲ್ಪನೆಯಾಗಿದೆ. ವೈಚಾರಿಕವಾಗಿ ಚರ್ಚೆ ಮಾಡಿದಾಗ ಜ್ಞಾನ, ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅವರು ಸ್ಥಾಪನೆ ಮಾಡಿರುವ ಪ್ರತಿಯೊಂದರಲ್ಲು ನೈಸರ್ಗಿಕತೆ ಆಡಗಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಈ ಸ್ಥಳವನ್ನು ನೋಡಿ ನಾನು ಮೂಖ ವಿಸ್ಮತನಾಗಿದ್ದೇನೆ. ನನ್ನ ನಿರೀಕ್ಷೆಗೂ ಮೀರಿ ಕಡಿಮೆ ಅವಧಿಯಲ್ಲಿ ಸದ್ಗುರು ಮತ್ತು ತಂಡ ಮಾಡಿದೆ. ಸಾಮಾನ್ಯವಾಗಿ ದೇವರ ಮುಂದೆ ಪ್ರಾರ್ಥನೆ ಮಾಡಿ ವರ ಕೇಳುತ್ತೇನೆ. ಕಳೆದ ಎರಡು ವರ್ಷಗಳ ಹಿಂದೆ ತಮಿಳು ನಾಡಿನ ಸಂಸ್ಥೆಗೆ ಭೇಟಿ ನೀಡಿ ಬೇಡಿಕೆ ಇಟ್ಟಿದ್ದೆ. ಇದಕ್ಕೆ ಸ್ಪಂದಿಸಿದ ಅವರು ಇಷ್ಟು ಬೇಗ ನೆರವೇರಿಸುತ್ತಾರೆ ಎಂದು ಭಾವಿಸಿರಲಿಲ್ಲ ಎಂದರು.
ಕರ್ನಾಟಕ ಭೂ ಪಟದಲ್ಲಿ ವಿಶೇಷ ಸ್ಥಾನ ದೊರೆಯಲಿದೆ. ನಾವೆಲ್ಲ ಆಧ್ಯಾತ್ಮಕವಾಗಿ ಬೆಳೆಯಬೇಕು. ಯಂತ್ರಿಕ ಬದುಕಿನ ೨೧ ಶತಮಾನದಲ್ಲಿ ಬೋಗಗಳಿಗೆ ಒತ್ತು ನೀಡಲಾಗಿದೆ. ಆದರೆ ಅಂತರಾಳದಲ್ಲಿ ಉನ್ನತವಾಗಿ ದೇವರ ಅನುಗ್ರಹಕ್ಕೆ ಪಾತ್ರವಾಗುವುದು. ಆತ್ಮವನ್ನು ಪ್ರಕಾಶಗೊಳಿಸುವುದನ್ನು ಆರ್ಥ ಮಾಡಿಸುವುದೇ ಆಧ್ಯಾತ್ಮಿಕತೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತಿç ಮುಂತಾದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!