ಸಿಎಂ ಬೊಮ್ಮಾಯಿ ದಕ್ಷಿಣದ ವಾಜಪೇಯಿ ಇದ್ದಂತೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಎಸ್ಟಿ,ಎಸ್ಸಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ನಮ್ಮ ಸರ್ಕಾರ ಇತಿಹಾಸ ಸೃಷ್ಟಿಸಿದೆ, ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಕ್ಷಿಣದ ಭಾಗದ ವಾಜಪೇಯಿ ಅವರಿದ್ದಂತೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಅವರು ಹೇಳಿದರು.
ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಬಳಿಯ ಜಿ.ಸ್ಕ್ವಾಯರ್ ಪ್ರದೇಶದಲ್ಲಿ ಬಿಜೆಪಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದರು. ಮೀಸಲಾತಿ ಹೆಚ್ಚಳ ಮುಂದಿಟ್ಟುಕೊಂಡು ಕಾಂಗ್ರೆಸ್ ‌ನವರು ಮತಪಡೆದು ದ್ರೋಹ ಮಾಡಿದರು, ಅದನ್ನು ನಮ್ಮ ಸರ್ಕಾರ ಸಾಧನೆ ಮಾಡಿದೆ. ಮುಂಬರುವ 2023ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರ ಬರಲಿದೆ, ವಾಲ್ಮೀಕಿ, ಅಂಬೇಡ್ಕರ್ ಅವರ ಆರ್ಶಿವಾದ , ನಮ್ಮ ಜೋಡಿ ಗುಂಡಿಗೆ ಇರುವ ಸಿ.ಎಂ.ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಶ್ರಮ, ನಮ್ಮ ಸಮಾಜದ ಬಗ್ಗೆ ಅವರಗಿದ್ದ ಕಳಕಳಿಯಿಂದ ಈ ಸಾಧನೆಯಾಗಿದೆ. ಕಳೆದ 2014 ರಿಂದ 2018ರ ವರೆಗೆ ಸಿದ್ದರಾಮಯ್ಯ ಸಿ.ಎಂ.ಆಗಿದ್ದಾಗ, ಎಸ್ಸಿ, ಎಸ್ಟಿ ವರ್ಗದವರು ನೆನಪಾಗಲಿಲ್ಲ, ಅದನ್ನು ನಮ್ಮ ದಕ್ಷಿಣ ಭಾಗದ ವಾಜಪೇಯಿ ಬೊಮ್ಮಾಯಿ ಅವರು ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಮೀಸಲಾತಿ ಹೆಚ್ಚಳದಿಂದ ನಮ್ಮ ಮಕ್ಕಳ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನವರು ನಮ್ಮನ್ನು ಗೇಲಿ ಮಾಡಿದ್ರು, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದು, ತಾಕತ್ತಿದ್ದರೇ ಬನ್ನಿ‌ನೋಡಿಯೇ ಬಿಡೋಣ, ನಾವೇನು ಬಳೆ ಹಾಕ್ಕೋಂಡಿಲ್ಲ, ಬನ್ನಿ ಎಂದು ಕಾಂಗ್ರೆಸ್ ನವರಿಗೆ ಸವಾಲೆಸೆದರು. ಸಮುದಾಯದ ಜನರು ಭಿಕ್ಷೆ ಹಾಕಿ ನನ್ನನ್ನು ಬೆಳೆಸಿದ್ದು, ಅದನ್ನು ಮೀಸಲಾತಿ ಹೆಚ್ಚಿಸುವ ಮೂಲಕ ಋಣ ತೀರಿಸುವ ಕೆಲಸ ಮಾಡಿದ್ದೇನೆ, ಚುನಾವಣೆ ಸುನಾಮಿ ಎನ್ನುವ ಸಿದ್ದರಾಮಯ್ಯ ಅವರಿಗೆ, ಸಮಾವೇಶದ ಬಳಿಕ ನಿಜವಾದ ಸುನಾಮಿ ಶುರುವಾಗಲಿದೆ. ಕಾಂಗ್ರೆಸ್ ನ್ನು ಮುಂಬರುವ ಚುನಾವಣೆಯಲ್ಲಿ ‌ಬೇರ ಸಮೇತ ಕಿತ್ತು ಹಾಕಲಾಗುವುದು. ಎಸ್ಸಿ ಹಾಗೂ ಎಸ್ಟಿ ವರ್ಗದ ಜನರ ಆರ್ಶಿವಾದ ಬಿಜೆಪಿ ಪರವಾಗಿದೆ, ನೋಡಿಯೇ ಬಿಡೋಣ ಬನ್ನಿ ಎಂದು ಸವಾಲೆಸೆದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಭಗವಂತ ಖೂಬಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಪ್ರಭು ಚೌವ್ಹಾಣ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ಎಮ್ಮೆಲ್ಸಿ ವೈ.ಎಂ.ಸತೀಶ್, ನಗರ ಶಾಸಕ ಸೋಮಶೇಖರ್ ರೆಡ್ಡಿ, ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ್, ಶಾಸಕ ಎಂ.ಎಸ್.ಸೋಮಲಿಂಗಪ್ಪ, ಸಚಿವರಾದ ಸಿಸಿ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಶಿವನಗೌಡ ನಾಯಕ್, ರಾಜೂಗೌಡ, ಮುರಹರಗೌಡ, ಅಮರೇಶ್ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!