Thursday, July 7, 2022

Latest Posts

ಪ್ರಧಾನಿ ಮೋದಿ ಅಜೇಯ ಆಡಳಿತಕ್ಕೆ 20 ವರ್ಷ: ಪತ್ರ ಬರೆದು ಶುಭಾಶಯ ತಿಳಿಸಿದ ಸಿಎಂ ಬೊಮ್ಮಾಯಿ

ಹೊಸ ದಿಗಂತ ವರದಿ, ಮೈಸೂರು:

ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿ ಇಂದಿಗೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಗುರುವಾರ ಮೈಸೂರಿನ ಸುಬ್ಬರಾಯನಕೆರೆ ಪೋಸ್ಟ್ ಆಫೀಸ್ ಆಯೋಜಿಸಲಾಗಿದ್ದ ಅಂಚೆ ಮೂಲಕ ನರೇಂದ್ರ ಮೋದಿ ಶುಭಾಶಯ ಪತ್ರ ಕಳುಹಿಸುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಪತ್ರ ಬರೆದರು. ನಿಮ್ಮ 20 ವರ್ಷದ ಕ್ರಿಯಾಶೀಲ, ಅನವರಿತ ಸೇವೆಗೆ ಅಭಿನಂದನೆ. ದೇಶದ ಜನರಿಗೆ ಉಚಿತ ಲಸಿಕೆ ನೀಡಿದ್ದಕ್ಕೆ ಧನ್ಯವಾದ ಎಂದು ಬರೆದ ಪತ್ರವನ್ನು ಅಂಚೆ ಡಬ್ಬಿಗೆ ಹಾಕುವ
ಮೂಲಕ ಪ್ರಧಾನಿ ಮೋದಿಗೆ ಪೋಸ್ಟ್ ರವಾನೆ ಮಾಡಿ ಶುಭಕೋರಿದರು.
ಈ ವೇಳೆ ಶಾಸಕ ಎಲ್.ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರರಾಜು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss