ಹೊಸದಿಗಂತ ವರದಿ, ಹುಬ್ಬಳ್ಳಿ:
ಆಪ್ತ ಸ್ನೇಹಿತನ ಅಗಲಿಕೆಯಿಂದ ಸಿಎಂ ಬಸವರಾಜ ಬೊಮ್ಮಾಯಿಯವರು ಕಣ್ಣಿರಾದರು. ಇಲ್ಲಿಯ ಶಕ್ತಿನಗರದ ನಿವಾಸಿ ರಾಜು ಪಾಟೀಲ ಬುಧವಾರ ರಾತ್ರಿ ಹೃದಯಾಘಾತ ದಿಂದ ಮೃತರಾಗಿದ್ದು, ಅವರ ಅಂತಿಮ ದರ್ಶನಕ್ಕೆ ಸಿಎಂ ಅವರು ಕುಟುಂಬ ಸಮೇತ ಬಂದು ರಾಜು ಪಾಟೀಲ ಅವರ ಮನೆಗೆ ಭೇಟಿ ಅವರ ಕುಟುಂಬಕ್ಕೆ ಸಾಂತ್ವಾನ ನೀಡಿದರು.
ರಾಜು ಪಾಟೀಲ ಸಿಎಂ ಅವರು ಸಹೋದರ ಸಂಬಂಧಿ ಮತ್ತು ಆಪ್ತ ಸ್ನೇಹಿತರಾಗಿದ್ದು, ಬಾಲ್ಯದಿಂದ ಒಟ್ಟಿಗೆ ಬೆಳೆದಿದ್ದರು. ಹುಬ್ಬಳ್ಳಿಯಲ್ಲಿರುವಾ ಹೆಚ್ಚಿನ ಸಮಯವನ್ನು ಅವರು ಸ್ನೇಹಿ ರಾಜು ಪಾಟೀಲ ಅವರೊಂದಿಗೆ ಕಳೆಯುತ್ತಿದ್ದರು.