ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಸಿಎಂ ಕನಸು ಕಾಣುತ್ತಿರುವ ಕಾಂಗ್ರೆಸ್ನದ್ದು ತಿರುಕನ ಕನಸು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸ್ಥಾನ ಖಾಲಿಯೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವೂ ಇಲ್ಲ ಹಾಗಿದ್ದರೂ ಕಾಂಗ್ರೆಸ್ ಪಕ್ಷ ಸಿಎಂ ಕನಸು ಕಾಣುತ್ತಿದೆ. ಅಧಿಕಾರದಲ್ಲಿರುವ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಒಂದು ಸ್ವಾಭಾವಿಕ ಕ್ರಿಯೆ, ಮುಖ್ಯಮಂತ್ರಿ ಹುದ್ದೆ ಖಾಲಿ ಇದ್ದಾಗ ಪೈಪೋಟಿ ಮಾಡುವುದು ಸ್ವಾಭಾವಿಕ, ಆದರೆ ಕಾಂಗ್ರೆಸ್ಗೆ ಅಧಿಕಾರವೇ ಇಲ್ಲ ಎಂದರು.
ಮಸ್ಕಿಯಲ್ಲಿ ಬಿಜೆಪಿಯಿಂದ ಹೋದ ಅಭ್ಯರ್ಥಿ ನಿಂತ ಕಾರಣಕ್ಕೆ ಕಾಂಗ್ರೆಸ್ ಗೆದ್ದಿತು. ಇನ್ನೆಲ್ಲಾ ಉಪ ಚುನಾವಣೆಯಲ್ಲೂ ಸೋತಿದೆ. ಆದರೂ ಅವರು ಸಿಎಂ ಸ್ಥಾನದ ಕನಸು ಕಾಣುತ್ತಿದ್ದಾರೆ. ಅದನ್ನು ತಿರಕನ ಕನಸು ಎಂದು ಕರೆಯಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ಗೆ ವಿಶ್ವಾಸ ಬರುವ ರೀತಿಯಲ್ಲಿ ಫಲಿತಾಂಶ ಬರುತ್ತಿಲ್ಲ. ಪಶ್ಚಿಮ ಬಂಬಾಳದಲ್ಲಿ ಶೂನ್ಯ ಸಂಪಾದನೆ, ಉತ್ತರ ಪ್ರದೇಶದಲ್ಲಿ ಸ್ವತಃ ಪ್ರಿಯಾಂಕ ಗಾಂಧಿ ಅವರನ್ನು ಮುಂಚೂಣಿಗೆ ತಂದು ನಿಲ್ಲಿಸಿದರೂ ಜಿ.ಪಂ. ಮತ್ತು ಕಾರ್ಪೊರೇಟ್ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪಾದನೆ ಶೂನ್ಯ ಎಂದರು.
ಅವರು ಸಾಂಪ್ರದಾಯಿಕ ಎಂದು ಕೊಳ್ಳುವ ರಾಜ್ಯಗಳಲ್ಲೆ ಅವರಿಗೆ ಶೂನ್ಯ ಸಂಪಾದನೆ ಆಗುತ್ತಿರುವಾಗ ಯಾವ ಹಿನ್ನೆಲೆಯಲ್ಲಿ ಅವರು ಸಿಎಂ ಕನಸು ಕಾಣುತ್ತಿದ್ದಾರೆ ಎನ್ನುವುದು ಆಶ್ಚರ್ಯ ತರುತ್ತಿದೆ. ಅವರ ಉತ್ಸಾಹವನ್ನು ಮೆಚ್ಚಬೇಕು. ಇನ್ನಷ್ಟು ಜನ ಕಾಂಗ್ರೆಸ್ ಬಿಟ್ಟು ಹೋಗದಿರಲಿ ಎನ್ನುವ ಕಾರಣಕ್ಕೆ ಈ ರೀತಿ ರಾಜಕಾರಣ ಮಾಡುತ್ತಿರಬಹುದು. ಏನೂ ಇಲ್ಲದೇ ಇರುವುದಕ್ಕೆ ಇಷ್ಟು ಕಚ್ಚಾಡುವವರು ಏನಾದರೂ ಸಿಗುವುದಾದರೇ ಇನ್ನೆಷ್ಟು ಕಚ್ಚಾಡುತ್ತಾರೆ ಎನ್ನುವುದನ್ನು ಯೋಚಿಸಬೇಕು ಎದು ಟೀಕಿಸಿದರು.