spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶನ ಉದ್ಘಾಟಿಸಿದ ಸಿಎಂ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಾಧಕನಿಗೆ ಸಾವು ಅಂತ್ಯವಲ್ಲ. ಬುದ್ಧ, ಬಸವ, ಅಂಬೇಡ್ಕರ್, ಮಹಾವೀರ ಇವರೆಲ್ಲ ಸಾಧಕರು, ಕಾಲಾತೀತರು. ಶಾಂತಿ ಸಾಧನೆ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು 72ನೇ ಸಂವಿಧಾನ ದಿನಾಚರಣೆ ಅಂಗವಾಗಿ ಗುರುವಾರ ಬೆಂಗಳೂರಿನ ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ನಾಗಸೇನಾ ಬುದ್ಧ ವಿಹಾರ ವತಿಯಿಂದ ನಾಗಸೇನಾ ವಿದ್ಯಾಲಯ ಮೈದಾನದಲ್ಲಿ ಆಯೋಜಿಸಿದ ‘ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶನ’ದ ಉದ್ಘಾಟಿದರು.
ಅವರೆಲ್ಲರೂ ಆದರ್ಶ, ತ್ಯಾಗದ ಬದುಕು ಬದುಕಿದವರು. ಅದಕ್ಕಾಗಿಯೇ ನಾವು ಅವರ ಸಾವಿನ ನಂತರ ಇವತ್ತೂ ಅವರನ್ನು ನೆನಪಿಸುತ್ತೇವೆ. ಅಮೆರಿಕದ ಯಾವುದೇ ಕಾರ್ಪೊರೇಟ್ ಕಂಪನಿಗೆ ಹೋದರೂ ಅಲ್ಲಿ ಬುದ್ಧನ ಪ್ರತಿಮೆ ಇರುತ್ತದೆ. ಇದು ಬುದ್ಧನ ಶಕ್ತಿ ಎಂದು ಸಿಎಂ ಹೇಳಿದರು.
ಪ್ರಸಕ್ತ ತ್ಯಾಗವನ್ನು ಇಟ್ಟುಕೊಂಡು ಆಧುನಿಕ ತಂತ್ರಜ್ಞಾನದ ಕಡೆಗೆ ಹೋಗಬೇಕಿದೆ. ಈ ಸಂದರ್ಭದಲ್ಲಿ ನಮ್ಮ ಬೇರುಗಳನ್ನು ನಾವು ಗಟ್ಟಿಯಾಗಿ ಇಟ್ಟುಕೊಳ್ಳಬೇಕಾಗಿರುವ ಸವಾಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂವಿಧಾನವನ್ನು ಉಳಿಸೋಣ, ಬದುಕನ್ನು ಕಟ್ಟೋಣ ಮತ್ತು ದೇಶವನ್ನು ಬೆಳೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಂ. ವೆಂಕಟಸ್ವಾಮಿ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ, ವಿವಿಧ ಮಠಾಧಿಪತಿಗಳು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss