ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ನೂ ಎರಡು ವರ್ಷ ಯಡಿಯೂರಪ್ಪನವರಿಗೆ ಸಿಎಂ ಅವಕಾಶ ಕೊಡಬೇಕು: ಅಭಿನವ ಸಂಗನಬಸವ ಸ್ವಾಮೀಜಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ವಿಜಯಪುರ:

ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ನವರಿಗೆ ಸಿಎಂ ಅವಕಾಶ ಕೊಡಬೇಕು. ಮುಖ್ಯಮಂತ್ರಿ ಬದಲಾವಣೆ ಮಾಡಿದ್ದರೆ, 2012-2013 ಸಮಸ್ಯೆ ಅನುಭವಿಸಿದ್ದಾರೆ, ಅದು ಮತ್ತೊಮ್ಮೆ ಅನುಭವಿಸಬೇಕಾಗುತ್ತದೆ ಎಂದು ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರ ಪರವಾಗಿ ಇಂದು ಎಲ್ಲ ಮಠಾದೀಶರು ಬೆನ್ನೆಲುಬಾಗಿ ನಿಂತಿದ್ದೇವೆ. ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದಂತಹ ವ್ಯಕ್ತಿ. ಪಕ್ಷ ಸಂಘಟನೆ ಮಾಡುವುದರ ಜೊತೆಗೆ, ದೆಹಲಿ ವರೆಗೆ ಸಂಸದರನ್ನು ಆಯ್ಕೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಕೋವಿಡ್ ನಂತಹ ಸಂದರ್ಭದಲ್ಲಿ ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅತೀವೃಷ್ಟಿ ಸಂದರ್ಭದಲ್ಲಿ ಸಹಿತ ಸಿಎಂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.

ನಮ್ಮ ನಿಲುವಿಗೆ ಹೈ ಕಮಾಂಡ್ ಬೆಲೆ ಕೊಡದಿದ್ದರೆ ಸ್ವಾಮೀಜಿಗಳ ಬೃಹತ್ ಸಮಾವೇಶ ಮಾಡಲಾಗುವುದು. ನಮ್ಮ ಮಠಾಧೀಶರ ಒಕ್ಕೂಟದ ಮೂಲಕ ಸಮಾವೇಶ ಮಾಡಲಾಗುವುದು. ಲಿಂಗಾಯತರಲ್ಲಿ ಸಾಕಷ್ಟು ಜನ ಮುಖಂಡರಿದ್ದಾರೆ, ಆದರೆ ಯಡಿಯೂರಪ್ಪ ನವರನ್ನು ಇಳಿಸಿವುದು ಬೇಡ ಎಂದರು.

ಯಡಿಯೂರಪ್ಪ ನವರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಹಿಂದೆ ಭ್ರಷ್ಟಾಚಾರ ಮಾಡಿರುವ ಆರೋಪ ಇರಬಹುದು, ಆದರೆ ಈಗ ಇಲ್ಲ. ಅತೀವೃಷ್ಟಿ ಹಾಗೂ ಕೋವಿಡ್ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಈಗ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಅವರು ಸಿಎಂ ಆಗಿ ಅವರೇ ಮುಂದು ವರೆಯಬೇಕು ಎಂಬುದು ನಮ್ಮ ಹಾಗೂ ಜನರ ಆಶಯ ಎಂದು ಹೇಳಿದರು.

ಪಂಚಮಸಾಲಿ ಸ್ವಾಮಿಜಿಗಳ ಒಕ್ಕೂಟ ರಚನೆ ವಿಚಾರ ಕುರಿತು, ಆ ಒಕ್ಕೂಟಕ್ಕೂ ರಚನೆ ಹಿಂದೆ ಸಿಎಂ ಗೆ ಬೆಂಬಲ ಸೂಚಿಸುವುದಾಗಿಲ್ಲ. ಆ ಒಕ್ಕೂಟದ ಉದ್ದೇಶವೇ ಬೇರೆ, ಆ ಕುರಿತು ಹಿಂದೆ ಕೂಡ ನಾನು ಸ್ಪಷ್ಟ ಪಡಿಸಿದ್ದೇನೆ. ಯಡಿಯೂರಪ್ಪ ನವರದ್ದು ಎಲ್ಲ ಪಕ್ಷದ ಮುಖಂಡರ ಜೊತೆ ಉತ್ತಮ ಸಂಬಂಧವಿದೆ. ಆದರೆ, ಒಂದು ಕುಟುಂಬದಲ್ಲಿ ವೈ ಮನಸ್ಸು ಇರುವುದು ಸಾಮಾನ್ಯ. ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗೆ ರಾಜಕಾರಣಿಗಳ ಬೆಂಬಲ ಸೂಚಿಸಿದ್ದೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss