ಬಳ್ಳಾರಿಯಲ್ಲಿ ಯೋಗ ದಿನ ಆಚರಿಸಿದ ಸಿಎಂ ಸಿದ್ದರಾಮಯ್ಯ, ನಟಿ ಶ್ರೀಲೀಲಾ ಸಾಥ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಬಳ್ಳಾರಿಯ ಸಂಡೂರ ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್ ವಿದ್ಯಾನಗರದಲ್ಲಿ ಯೋಗ ಪ್ರದರ್ಶನ ಮಾಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಗಣಿ ನಾಡಿನಲ್ಲಿ ಆಚರಣೆ ಮಾಡಿದ್ದು, ನಟಿ ಶ್ರೀಲೀಲಾ ಸಾಥ್‌ ನೀಡಿದ್ದಾರೆ.

ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ನಟಿ ಶ್ರೀಲೀಲಾ, ಸಚಿವ ಸಂತೋಷ ಲಾಡ್, ಸಂಸದ ಈ. ತುಕಾರಾಂ ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಸಿಎಂಗೆ ಸಾಥ್‌ ನೀಡಿದ್ದಾರೆ.

ವಚನಾನಂದ ಶ್ರೀಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆರಂಭವಾಯಿತು. ಅವಧೂತ ವಿನಯ್ ಗುರೂಜಿ ಅವರು ಯೋಗ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!