3 ಗಂಟೆ 36 ನಿಮಿಷಗಳ ಸುದೀರ್ಘ ಬಜೆಟ್‌ ಮಂಡನೆ ಮುಗಿಸಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್‌ ಮುಕ್ತಾಯವಾಗಿದೆ. ಸತತವಾಗಿ 3 ಗಂಟೆ 36 ನಿಮಿಷಗಳ ಸುದೀರ್ಘ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮುಗಿಸಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಷನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಸತತ 17 ಬಾರಿ ಬಜೆಟ್‌ ಓದಿ ದಾಖಲೆ ಸೃಷ್ಟಿಸಿದ್ದಾರೆ.