ಹೊಸದಿಗಂತ ವರದಿ ಗದಗ :
ತಾಲ್ಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಕುಂಭ ಕಳಸಕ್ಕೆ ನಮಿಸಿ ನಂತರ ಹಾಲಿನಲ್ಲಿ ಕೈತೊಳೆದು ಬೆಳ್ಳಿ ಗಾರೆಯಿಂದ ಉತ್ಖನನಕ್ಕೆ ಚಾಲನೆ ನೀಡಿದರು.
ನಂತರ ಲಕ್ಕುಂಡಿ ತಹಶೀಲ್ದಾರ ಓಣಿಯ ಬಯಲು ಪ್ರದೇಶದ ಅವಶೇಷ ಸಂಗ್ರಹಾರದಲ್ಲಿ ಸಾವಿರಕ್ಕೂ ಹೆಚ್ಚು ಶಿಲಾಶಾಸನ ಪ್ರಾಚ್ಯಾವಶೇಷಗಳನ್ನು ವೀಕ್ಷಣೆ ಮಾಡಿದರು.
ಸಚಿವ ಎಚ್ ಕೆ ಪಾಟೀಲ, ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್,ನರಗುಂದ ಶಾಸಕ ಸಿ.ಸಿ.ಪಾಟೀಲ, ಜಿ.ಎಸ್.ಪಾಟೀಲ,ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ,ಬಿ. ಬಿ.ಅಸೂಟಿ, ಗ್ರಾಂ ಪಂಚಾಯತ್ ಅಧ್ಯಕ್ಷ ಪೂಜಾರ ಸೇರಿದಂತೆ ಮುಂತಾದವರು ಉಪಸ್ಟಿತರಿದ್ದರು.