ಹೊಸದಿಗಂತ ವಿಜಯನಗರ:
ತುಂಬಿ ತುಳುಕುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು.
ಕಳೆದ ಆಗಸ್ಟ್ ೬ ರಂದು ನಿಗದಿಯಾಗಿದ್ದ ಬಾಗಿನ ಅರ್ಪಣೆ ನಿಗದಿಯಾಗಿತ್ತು. ಆದರೆ, ರಾಮನಗರದಿಂದ ಮೈಸೂರು ವರೆಗೆ ಹಮ್ಮಿಕಡಿದ್ದ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆ. 13 ಕ್ಕೆ ನಿಗದಿಯಾಗಿತ್ತು. ಆದರೆ, ಜಲಾಶಯದ 19 ನೇ ಗೇಟ್ ಕೊಚ್ಚಿ ಹೋಗಿದ್ದರಿಂದ ಕಾರ್ಯಕ್ರಮ ರದ್ದಾಗಿತ್ತು. ಡ್ಯಾಂ ಕ್ರಸ್ಟ್ ಗೇಟ್ ಜಾಗದಲ್ಲಿ ಸ್ಟಾಪ್ಲರ್ ಗೇಟ್ ಅಳವಡಿಕೆ ಬಳಿಕ ಡ್ಯಾಂ ಮತ್ತೆ ಭರ್ತಿಯಾಗಿದೆ. ಹೀಗಾಗೊ ಸಿಎಂ ತಾಯಿ ತುಂಗಭದ್ರೆಗೆ ಬಾಗೀನ ಅರ್ಪಿಸಿದರು.
ಸಿಎಂಸಿದ್ದರಾಯ್ಯ ಅವರಿಗೆ ಸಚಿವರಾದ ಶಿವರಾಜ್ ತಂಗಡಗಿ, ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಡಾ.ಶರಣ ಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದರಾದ ಕೆ.ರಾಜಶೇಖರ ಹಿಟ್ನಾಳ್, ಈ.ತುಕಾರಾಂ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಹನುಮಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ಜೆ.ಎನ್.ಗಣೇಶ, ಆರ್.ಬಸನಗೌಡ ತುರುವಿಹಾಳ ಸಾಥ್ ನೀಡಿದರು. ಟಿಬೊ ಬೋರ್ಡ್ ಅಧಿಕಾರಿಗಳು ಪಾಲ್ಗೊಂಡಿದ್ದರು.