ಹೊಸ ದಿಗಂತ ವರದಿ, ಹಾವೇರಿ:
ಹಾವೇರಿ ಜಿಲ್ಲೆಯಲ್ಲಿ ಭಾನುವಾರ ಜರುಗಲಿರುವ ಆರ್ಯ ಈಡಿಗ ಸಮಾಜದ ಜಿಲ್ಲಾ ಸಮಾವೇಶಕ್ಕೆ ರಾಜ್ಯದ ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆರ್ಯ ಈಡಿಗ ಸಮಾಜದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ನ್ಯಾಯ ಒದಗಿಸುವುದಾಗಿ ಹೇಳಿದರು.
ಈ ಸಮಯದಲ್ಲಿ ಸಮಾಜದ ಗುರುಗಳಾದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಸಮಾಜದ ೭ ಜನ ಶಾಸಕರಿದ್ದು ಇವರಲ್ಲಿ ಒಬ್ಬರು ಮಾತ್ರ ಕೋಟಾ ಶ್ರೀನಿವಾಸ ಪೂಜಾರಿಯವರು ಮಾತ್ರ ಸಚಿವರಾಗಿದ್ದಾರೆ ಹೀಗಾಗಿ ರಾಜಕೀಯವಾಗಿ ಆರ್ಯ ಈಡಿಗ ಸಮಾಜಕ್ಕೆ ಇನ್ನು ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದರು.
ಇದಲ್ಲದೆ ಆರ್ಯ ಈಡಿಗ ಸಮಾಜದ ಅಭಿವೃದ್ಧಿಗೆ ಇನ್ನು ಅನೇಕ ಕಾರ್ಯಗಳಾಬೇಕಾಗಿದೆ. ಸಮಾಜದ ಬೇಡಿಕೆಗಳು ಸಮರ್ಪಕವಾಗಿ ಇಡೇರಬೇಕಾದರೆ ಆರ್ಯ ಈಡಿಗ ನಿಗಮ ಮಂಡಳಿ ಸ್ಥಾಪನೆ ಆಗಬೇಕು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸ್ಥಾಪನೆ ಆಗುವಂತೆ ಒತ್ತಡ ತರಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಗುರುಗಳಾದ ರೇಣುಕಾನಂದ ಸ್ವಾಮೀಜಿ, ಜಿಲ್ಲಾ ಸಮಾವೇಶದ ಅಧ್ಯಕ್ಷ ಸತೀಶ್ ಈಳಿಗೇರ, ಮಾರುತಿ ಈಳಿಗೇರ, ಪರಶುರಾಮ್ ಈಳಿಗೇರ, ದೇವಪ್ಪ ಈಳಿಗೇರ, ಮುತ್ತಣ್ಣ ಈಳಿಗೇರ ಮತ್ತು ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.