ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಂತಾರಾಷ್ಟ್ರೀಯ ಕಾರ್ಮಿಕರ ದಿನಕ್ಕೆ ಸಿಎಂ ಯಡಿಯೂರಪ್ಪ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, ನಾಡಿನ ಎಲ್ಲ ಶ್ರಮಿಕ ಬಂಧುಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು.
ದೇಶ ನಿರ್ಮಾಣದ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ನಮ್ಮ ಲಕ್ಷಾಂತರ ಶ್ರಮಿಕರ,ಕಾರ್ಮಿಕರ ಪರಿಶ್ರಮ ಮತ್ತು ಬದ್ಧತೆ ಅನುಪಮವಾದದ್ದು. ಅವರೆಲ್ಲರ ಸಮರ್ಪಣಾಭಾವ ಅಭಿನಂದನೆಗಳನ್ನು ಸಲ್ಲಿಸೋಣ ಎಂದಿದ್ದಾರೆ.
ನಾಡಿನ ಎಲ್ಲ ಶ್ರಮಿಕ ಬಂಧುಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು. ದೇಶ ನಿರ್ಮಾಣದ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ನಮ್ಮ ಲಕ್ಷಾಂತರ ಶ್ರಮಿಕರ, ಕಾರ್ಮಿಕರ ಪರಿಶ್ರಮ ಮತ್ತು ಬದ್ಧತೆ ಅನುಪಮವಾದದ್ದು. ಅವರೆಲ್ಲರ ಸಮರ್ಪಣಾಭಾವ ಹಾಗೂ ಸಾಧನೆಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ.
— B.S. Yediyurappa (@BSYBJP) May 1, 2021
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಕಾರ್ಮಿಕ ಬಂಧುಗಳು ಎದುರಿಸುತ್ತಿರುವ ಕೊರೋನಾ ಸಂಕಷ್ಟದ ದಿನಗಳು ಶೀಘ್ರ ದೂರವಾಗಲಿ. ಸರ್ಕಾರ ಮತ್ತು ಸಮಾಜ ಕಾರ್ಮಿಕರ ಕಷ್ಟ-ನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಲಿ. ವರ್ತಮಾನದ ದುರಿತವನ್ನು ಎದುರಿಸುವ ಚೈತನ್ಯ ಕಾರ್ಮಿಕ ಬಂಧುಗಳದ್ದಾಗಲಿ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.
ಕಾರ್ಮಿಕ ಬಂಧುಗಳು ಎದುರಿಸುತ್ತಿರುವ ಕೊರೊನ ರೋಗದ ಸಂಕಷ್ಟದ ದಿನಗಳು ಶೀಘ್ರ ದೂರವಾಗಲಿ,
ಸರ್ಕಾರ ಮತ್ತು ಸಮಾಜ ಕಾರ್ಮಿಕರ ಕಷ್ಟ-ನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಲಿ.
ವರ್ತಮಾನದ ದುರಿತವನ್ನು ಎದುರಿಸುವ ಚೈತನ್ಯ ಕಾರ್ಮಿಕ ಬಂಧುಗಳದ್ದಾಗಲಿ.
ಕಾರ್ಮಿಕ ದಿನಾಚರಣೆಯ ಶುಭಾಶಯಗಳು.#InternationalLabourDay pic.twitter.com/jOePmUBsYK
— Siddaramaiah (@siddaramaiah) May 1, 2021